Header Ads
Header Ads
Breaking News

ಉಳ್ಳಾಲ ಸೇತುವೆ ಕಾಮಗಾರಿ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ಸಂಚರಿಸಲಾಗದ ಬಸ್

ಉಳ್ಳಾಲ: ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ನೀರು ತುಂಬಿ ಬಸ್ಸು ಹೋಗಲಾರದೆ ಪ್ರಯಾಣಿಕರು ಪರದಾಡಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಅಂಬ್ಲಮೊಗರು ಅಡು ಸಮೀಪ ಕಳೆದ ಕೆಲ ತಿಂಗಳಿನಿಂದ ಸೇತುವೆ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಸ್ಥಳೀಯ ಗದ್ದೆಯನ್ನು ಅಗೆದು ಪರ್ಯಾಯ ಮಾರ್ಗವನ್ನು ರಚಿಸಲಾಗಿದೆ. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗದ್ದೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಆದರೆ ಬಸ್ಸು ಸಂಚಾರ ನಿಂತಿರಲಿಲ್ಲ. ಇಂದು ಬೆಳಿಗ್ಗೆ ಪ್ರಯಾಣಿಕರನ್ನು ಹೊತ್ತ ಬಸ್ಸು ನೀರು ತುಂಬಿದ ಗದ್ದೆಯಲ್ಲಿ ತೆರಳಲಾಗದೆ ಸಂಚಾರವನ್ನೇ ಮೊಟಕುಗೊಳಿಸಿತು. ಮಂಗಳೂರು- ಎಲಿಯಾರುಪದವು ನಡುವೆ ಬೆರಳೆಣಿಕೆ ಬಸ್ಸುಗಳಿದ್ದು, ಸೋಮವಾರ ಬೆಳಗ್ಗಿನ ಜಾವ ಆಗಿರುವುದರಿಂದ ಹಲವರು ತೊಂದರೆಗೊಳಗಾದರು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಎಲ್ಲರೂ ಕೆಲ ಕಿ.ಮೀ ನಡೆದುಕೊಂಡು ಕುತ್ತಾರು ಜಂಕ್ಷನ್ ತಲುಪಿ, ಅಲ್ಲಿಂದ ಬಸ್ಸು ಹತ್ತಬೇಕಾಯಿತು. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅವೈಜ್ಞಾನಿಕ ವಾಗಿ ಮಾರ್ಗ ರಚಿಸಿರುವುದರಿಂದ ಜನ ತೊಂದರೆಗೀಡಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

Related posts

Leave a Reply