Header Ads
Breaking News

ಉಳ್ಳಾಳದಲ್ಲಿ ಲಾಕ್‍ಡೌನ್ ಸಂದರ್ಭದ ತೆರಿಗೆ ಏರಿಕೆ ವಿರೋಧಿಸಿ ಸಿಪಿಐಎಂ ವತಿಯಿಂದ ಪ್ರತಿಭಟನೆ

ಉಳ್ಳಾಲ: ಸಿಪಿಐಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಸೋಮೇಶ್ವರ ಪುರಸಭೆ ಎದುರು ಪ್ರತಿಭಟನೆ ನಡೆಯಿತು.ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ ಸೋಮೇಶ್ವರ ಗ್ರಾಮ ಪಂಚಾಯಿತಿ ಪುರಸಭೆ ಆಗಿ ಮೇಲ್ದರ್ಜೆಗೆ ಏರಿ ಪುರಸಭೆ ಆಗಿ ವರ್ಷಗಳು ಕಳೆದರೂ ಗ್ರಾಮದ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ. ಮನೆ ತೆರಿಗೆಯನ್ನು ವಿಪರೀತ ಏರಿಸಿ ಜನರಿಗೆ ದ್ರೋಹ ಬಗೆಯಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ಎಲ್ಲಿಯೂ ರಸ್ತೆ ಬದಿ ಚರಂಡಿಗಳಿಲ್ಲದೆ, ಮಳೆಗಾಲದ ನೀರು ರಸ್ತೆಯಲ್ಲೇ ಹರಿದು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳೆ ಸಂಘ ಉಳ್ಳಾಲ ವಲಯ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಉಳ್ಳಾಲ ವಲಯ ಸೆಂಟರ್ ಕಮಿಟಿ ಸದಸ್ಯ ಜಯಂತ್ ನ್ಯಾಕ್, ಡಿ.ವ್ಯೆ.ಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್ ಮತ್ತಿತರರು ಉಪಸ್ಥಿತಿತರಿದ್ದರು.

Related posts

Leave a Reply

Your email address will not be published. Required fields are marked *