Breaking News

ಉ. ಪ್ರ.ದಲ್ಲಿ ಸಾಮೂಹಿಕ ಅತ್ಯಾಚಾರ, ಬರೇಲಿಯ ಹಿಂದೂ ಯುವ ವಾಹಿನಿ ಸದಸ್ಯರ ಬಂಧನ

ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಹಿಂದೂ ಯುವ ವಾಹಿನಿ ನಾಯಕರನ್ನು ಮಂಗಳವಾರ ಬಂಧಿಸಲಾಗಿದೆ.
ಬರೇಲಿಯ ಗಣೇಶ್ ನಗರದ ಮಹಿಳೆ ದಾಖಲಿಸಿದ ದೂರು ಆಧರಿಸಿ ಬರೇಲಿ ವಿಭಾಗದ ಹಿಂದೂ ಯುವ ವಾಹಿನಿ ಅಧ್ಯಕ್ಷ ಜಿತೇಂದ್ರ ಶರ್ಮಾ, ನಗರ ಘಟಕ ಪಂಕಜ್ ಹಾಗೂ ಮತ್ತೊಬ್ಬ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಹಿನಿಯ ನಾಯಕರು ಸೋಮವಾರ ರಾತ್ರಿ ಮನೆಗೆ ನುಗ್ಗಿ ಕುಟುಂಬದವರ ಜತೆ ವಾಗ್ವಾದ ನಡೆಸಿದರು. ಬಳಿಕ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಮಹಿಳೆ ದೂರು ನೀಡಿದ್ದರು.

Related posts

Leave a Reply