Header Ads
Header Ads
Breaking News

ಊಟದ ಹಣ ಕೇಳಿದಕ್ಕೆ ತೊಕ್ಕೊಟ್ಟು ಕಾಪಿಕಾಡಿನಲ್ಲಿರುವ ಕ್ಯಾಂಟೀನ್‌ಗೆ ಬೆಂಕಿ

ಉಳ್ಳಾಲ: ಊಟದ ಹಣ ನೀಡದೆ ತಗಾದೆ ತೆಗೆದ ತಂಡವೊಂದು ರಸ್ತೆಬದಿಯ ಕ್ಯಾಂಟೀನ್ ಗೆ ಬೆಂಕಿ ಹಾಕಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದೆ.ಹಳೇಕೋಟೆ ನಿವಾಸಿ ಆಬೀದ್ ಎಂಬವರಿಗೆ ಸೇರಿದ ಕ್ಯಾಂಟೀನ್ ಗೆ ದುಷ್ಕರ್ಮಿಗಳು ಬೆಂಕಿ ಹಾಕಿ, ಕ್ಯಾಂಟೀನ್ ಸಾಮಗ್ರಿ ಸಂಪೂರ್ಣ ಸುಟ್ಟು ಹೋಗಿದೆ. ಸಂಜೆ ವೇಳೆ ಕುಂಪಲ ನಿವಾಸಿ ರವೂಫ್ ಮತ್ತು ತಂಡ ಕ್ಯಾಂಟೀನಿನಲ್ಲಿ ಊಟ ಮಾಡಿದ್ದಾರೆ. ಬಳಿಕ ರೂ.2000 ಬಿಲ್ ನೀಡದೇ ಇದ್ದಾಗ, ಆಬೀದ್ ಅವರು ಜಗಳ ನಡೆಸಿದ್ದರು. ಆದರೂ ರವೂಫ್ ಮತ್ತು ತಂಡ ಹಣ ನೀಡದೆ ತೆರಳಿದೆ. ಕ್ಯಾಂಟೀನ್ ಮುಚ್ಚಿದ ಬಳಿಕ ಅದೇ ತಂಡ ಬೆಂಕಿ ಹಾಕಿ ನಾಶಗೈದಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ಅಂಗಡಿ ಮಾಲೀಕ ಆಬೀದ್ ದೂರು ನೀಡಿದ್ದಾರೆ

Related posts

Leave a Reply