Header Ads
Header Ads
Breaking News

ಎಂಆರ್‌ಪಿಎಲ್ ಮತ್ತು ಒಎನ್‍ಜಿಸಿಯ 4ನೇ ಹಂತದ ಯೋಜನೆ:ಸಂಯುಕ್ತ ನಾಗರಿಕ ಹಿತರಕ್ಷಣಾ ಸಮಿತಿ ವಿರೋಧ

ಎಂಆರ್‌ಪಿಎಲ್ ಮತ್ತು ಒಎನ್‍ಜಿಸಿಯ 4ನೇ ಹಂತದ ಯೋಜನೆಗೆ ಭೂಸ್ವಾಧೀನತೆಗೊಳ್ಳುವ ಜಮೀನಿಗೆ ಭೂದರ ನಿಗದಿಗೊಳಿಸುವ ನಡೆಸಿದ ಸಭೆಯನ್ನು ಬಹಿಷ್ಕರಿಸಿದ್ದೇವೆ. ನಾವು ನಿಗದಿಪಡಿಸಿದಂತೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದೀಪಕ್ ಪೆರ್ಮುದೆ ಅವರು ಮಾಹಿತಿ ನೀಡಿ, ಮಂಗಳೂರಿನ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಮತ್ತು ಇತರ ಗ್ರಾಮಗಳ ಒಟ್ಟು 1011 ಎಕ್ರೆ ಜಮೀನು ಭೂಸ್ವಾಧೀನತೆಗೊಳ್ಳಪಟ್ಟಿದ್ದು, ಜಮೀನುಗಳಿಗೆ ಭೂದರ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಮಂಗಳೂರು ಪುರಭವನದಲ್ಲಿ ಸಭೆ ಕರೆದಿದ್ದರು. ಆ ಸಂದರ್ಭ ನಮ್ಮ ಬೇಡಿಕೆಗಳನನು ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಇದೀಗ ಮತ್ತೆ ಸಭೆಯನ್ನು ಕರೆದಿದ್ದು, ಆ ಸಭೆಯಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸಭೆಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕ್ರಮಕ್ಕೆ ನಾವು ವಿರೋಧ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದ್ದೇವೆ. ಅಲ್ಲದೆ ಎಕ್ರೆಗೆ 1.45 ಲಕ್ಷಕ್ಕೆ ಕಡಿಮೆ ಇರುವಂತೆ ಭೂದರ ನಿಗದಿಗೊಳಿಸಲು ಕ್ರಮಕೈಗೊಂಡರೆ ನಾವು ತೀವ್ರವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಲಹೆಗಾರರಾದ ಡೋನಿ ಸುವಾರಿಸ್, ಸಂತೋಷ್ ಕುಮಾರ್ ಮಯ್ಯ, ಮಾರ್ಕು ಡಿಸೋಜಾ, ಸುಧಾಕರ್ ಶೆಟ್ಟಿ, ಜಿ.ಕೆ. ಪೂವಪ್ಪ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply