Header Ads
Header Ads
Breaking News

ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆ ವಿಚಾರ ದಾಖಲೆ ಸಿದ್ದಪಡಿಸುವಲ್ಲಿ ವಂಚನೆ ಕೆಐಎಡಿಬಿ ಸಂಸ್ಥೆ ಎಂಅರ್‌ಪಿಎಲ್‌ನ ಎಜೆಂಟರಾಗಿ ವರ್ತಿಸುತ್ತಿದೆ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಆರೋಪ

ಮಂಗಳೂರು ತಾಲೂಕಿನಲ್ಲಿ ಎಮ್‌ಆರ್‌ಪಿಎಲ್‌ನ ೪ನೇ ಹಂತದ ವಿಸ್ತರಣೆಗೆ ಮುಂದಾಗಿದ್ದು, ತಪ್ಪು ದಾಖಲೆಗಳನ್ನು ನೀಡಿ, ಭೂ ಸ್ವಾದೀನಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಆರೋಪಿಸಿದೆ.ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ರೈತ ಹಸಿರುಸೇನೆಯ ಜಿಲ್ಲಾಧ್ಯಕ್ಷ ರವಿಕಿರಣ ಪುಣಚ ಅವರು, ಪ್ರಾಥಮಿಕ ಅಧಿಸೂಚನೆಗಿಂತಲೂ ಮೊದಲೇ ಸುಮಾರು ಎರಡು ವರ್ಷಗಳಿಂದ ಆಗಾಗ್ಯೆ ಕೆಐಎಡಿಬಿ ಸಂಸ್ಥೆಯು ಎಂಆರ್‌ಪಿಎಲ್ ಸಂಸ್ಥೆಯೊಡನೆ ಶಾಮೀಲಾಗಿ ಭೂ ಸ್ವಾದೀನತೆಯನ್ನು ವಿರೋಧಿಸುವ ಭೂಮಾಲಕರ, ಗ್ರಾಮಸ್ಥರ ಮೇಲೆ ಬೇದರಿಕೆ ಹಾಕುತ್ತಿದ್ದಾರೆ.
ಅಲ್ಲದೆ ಮಾರ್ಚ್ 13ರಂದು ಪ್ರತಿಭಟನಾಕಾರನ್ನು ಜಿಲ್ಲಾಧಿಕಾರಿಯವರ ಪ್ರತಿನಿಧಿಯಾಗಿ ಬೇಟಿಮಾಡಿದ್ದ ತಹಶೀಲ್ದಾರರು, ದಾಖಲೆಗಳನ್ನು ಪರಿಶೀಲಿಸಿ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಸರಿ ಎಂಬುವುದಾಗಿ ಒಪ್ಪಿಕೊಂಡು, ಭೂ ಸ್ವಾಧೀನತೆಯ ವಿಚಾರದಲ್ಲಿ ಕೆಐಎಡಬಿಯಿಂದ ನಡೆದ ಎಲ್ಲ ಅಕ್ರಮಗಳ ಬಗ್ಗೆಯೂ ಪರಿಶೀಲಿಸುವುದಾಗಿ ಸಭೆ ನಡೆಸುವುದಾಗಿ ಒಪ್ಪಿಕೊಂಡರು. ಆದರೆ, ಭೂಸ್ವಾಧೀನದ ಅಕ್ರಮಗಳಿಗೆ ಮುಖ್ಯ ಕಾರಣಕರ್ತರಾದ ವಿಶೇಷ ಭೂ ಸ್ವಾದೀನಾಧಿಕಾರಿಯವರ ಬಗ್ಗೆ ತನಿಖೆ ಕೈಗೊಂಡು ಅವರನ್ನು ಅಮಾನತಿನಲ್ಲಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಮಧುಕರ್ ಆಮೀನ್, ಕಾರ್ಯದರ್ಶಿ ಲೋರೆನ್ಸ್ ಡಿ ಕುನ್ನ, ವಿದ್ಯಾದಿನಕರ, ಹೇಮಲತಾ ಭಟ್ ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು