Header Ads
Header Ads
Breaking News

ಎಂಎಸ್‌ಎಫ್ ನಿಂದ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌ಗೆ ಚಾಲನೆ

ತಿ ಹಮ್ಮಿಕೊಂಡ ಪರಿಸ್ಥಿತಿ ಸೌಹಾರ್ದ ಕಾರ್ಯಕ್ರಮದ ಭಾಗವಾಗಿ ಎಂಎಸ್‌ಎಫ್ ರಾಜ್ಯಾಧ್ಯಂತ ಎಲ್ಲಾ ಕ್ಯಾಂಪಸ್‌ಗಳಲ್ಲೂ ಸಂಘಟಿಸಿಕೊಂಡು ಬರುತ್ತಿರುವ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌ಗೆ ಕಾಸರಗೋಡಿನಲ್ಲಿ ಚಾಲನೆ ದೊರಕಿತು.ಕಾಸರಗೋಡು ಸರಕಾರಿ ಕಾಲೇಜಿನ ಆವರಣದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಕಾರ್ಯಕ್ರಮಕ್ಕೆ ಎಂ ಎಸ್ ಎಫ್ ಜಿಲ್ಲಾಧ್ಯಕ್ಷ ಅಬಿತಾರಂಗಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ಲಾಸ್ಟಿಕ್ ಬಳಕೆಯಿಂದ ಹಲವು ರೋಗಗಳ ಜೊತೆಯಾಗಿ ಪ್ರಾಣಿ ಸಂಕುಲ ಜೀವಕ್ಕೆ ಕುತ್ತು ಬರುತ್ತಿದೆ. ಪ್ಲಾಸ್ಟಿಕ್ ಪರಿಸರ ಮಹಾ ಶತ್ರುವಾಗಿದೆ.ಯುವ ಜನತೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕಾದದ್ದು ಅನಿವಾರ್ಯ ಎಂಬುದಾಗಿ ಹೇಳಿದರು.ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಸಂಗ್ರಹಿಸಿ ವೈಜ್ಞ್ಹಾನಿಕವಾಗಿ ವಿಲೇವಾರಿ ಮಾಡುವಂತೆ ಕಾರ್ಯಕರ್ತರನ್ನು ವಿನಂತಿಸಿಕೊಂಡರು.

Related posts

Leave a Reply