Breaking News

ಎಂಡೋ ಸಂತ್ರಸ್ತರ ಜೊತೆ ಇಫ್ತಾರ್,  ಕೊಕ್ಕಡದಲ್ಲಿ ಸೌಹಾರ್ದ ಕೂಟ


ಆಲ್ ಫಲಾಹ್ ಫೌಂಡೇಶನ್ ಬೆಂಗಳೂರು, ಎಂ. ಪ್ರೆಂಡ್ಸ್ ಮಂಗಳೂರು ವತಿಯಿಂದ ಎಂಡೋ ಸಂತ್ರಸ್ತರ ಜೊತೆ ಇಪ್ತಾರ್ ಕೂಟವು ಹಸನಿಯ್ಯ ಚಾರಿಟೇಬಲ್ ಎಜುಕೇಶನ್ ಸೆಂಟರ್ ಪಟ್ಟೂರು ಕೊಕ್ಕಡದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿಹಾಬುದ್ದಿನ್ ಇಂಬಚ್ಚಿ ಕೊಯಾ ತಂಞಲ್ ದುವಾ ಆಶಿರ್ವಚನ ನೀಡಿದರು, ರಂಜಾನ್ ಪ್ರವಚನವನ್ನು ಸೀದ್ದಿಕ್ ಮೊಂಟುಗುಳಿ ನೆರವೇರಿಸಿದರು. ಎಂಡೋ ಸಂತ್ರಸ್ತರಿಗೆ ರಂಜಾನ್ ಕಿಟ್ ವಿತರಣೆ, ಈದ್ ವಸ್ತ್ರ ವಿತರಣೆ ಹಾಗೂ ಸಹಾಯ ಧನ ವಿತರಣಾ ಕಾರ್ಯಕ್ರಮದ ಬಳಿಕ ಎಂಡೋ ಸಂತ್ರಸ್ತರ ಜೋತೆ ಇಪ್ತಾರ್ ಕೂಟ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎಂ. ಪ್ರೆಂಡ್ಸ್‌ನ ಅದ್ಯಕ್ಷರಾದ ಹನೀಫ್, ಸಾಹುಲ್ ಹಮೀದ್, ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯರಾದ ಕೆ. ಎಂ. ಸಿದ್ದೀಕ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷದ್ ವರ್ಕಾಡಿ, ಸಾಫಿ ಸಖಾಫಿ ಉಸ್ತಾದ್ ಉಪಸ್ಥಿತರಿದ್ದರು.

Related posts

Leave a Reply