Header Ads
Header Ads
Breaking News

ಎಂಡೋ ಸಂತ್ರಸ್ತರ ಮೂರು ಲಕ್ಷ ರೂ. ತನಕದ ಸಾಲ ಮನ್ನಾ ಮಹತ್ವದ ತೀರ್ಮಾನ ಕೈಗೊಂಡ ಕೇರಳ ಸರ್ಕಾರ

ಕಾಸರಗೋಡು ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರ ಪೈಕಿ ಬ್ಯಾಂಕ್ ಸಾಲ ಹೊಂದಿರುವವರ 50 ಸಾವಿರ ರೂ. ನಿಂದ ಮೂರು ಲಕ್ಷ ರೂ. ತನಕದ ಸಾಲ ಮನ್ನಾ ಮಾಡುವ ಮಹತ್ವದ ತೀರ್ಮಾನ ಸರಕಾರ ಕೈ ಗೊಂಡಿದೆ.

ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈ ಗೊಳ್ಳಲಾಗಿದೆ. ಕಂದಾಯ ಸಚಿವ ಇ ಚಂದ್ರ ಶೇಖರನ್ ಮತ್ತು ಆರೋಗ್ಯ ಖಾತೆ ಸಚಿವೆ ಕೆ ಕೆ ಶೈಲಜಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಾಲ ಮನ್ನಾಗೊಳಿಸಲು 7.63 ಕೋಟಿ ರೂ. ಬಿಡುಗಡೆಗೊಳಿಸಲಾಗುವುದಾಗಿ ಮುಖ್ಯ ಮಂತ್ರಿ ಸಭೆಯಲ್ಲಿ ತಿಳಿಸಿದ್ದಾರೆ.