Header Ads
Breaking News

ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಕಾರುಣ್ಯ” ಯೋಜನೆಯ ಸಾವಿರ ದಿನಗಳು ಎನ್ನುವ ವಿಶೇಷ ಕಾರ್ಯಕ್ರಮ

ಮಂಗಳೂರಿನ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಕಾರುಣ್ಯ” ಹೆಸರಿನಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ರಾತ್ರಿಯ ಉಚಿತ ಭೋಜನ ನೀಡುವ ಯೋಜನೆಗೆ ಸಹಸ್ರ ದಿನ ಪೂರ್ಣ ಗೊಂಡ ಹಿನ್ನೆಲೆಯಲ್ಲಿ “ಕಾರುಣ್ಯ” ಸಾವಿರ ದಿನ ಅನ್ನುವ ಕಾರ್ಯಕ್ರಮ ನಗರದ ಐಎಂಎ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳ ಜತೆಗಾರರು ಹಲವು ಬಾರಿ ಸೇವಿಸಲು ಆಹಾರವಿಲ್ಲದೆ ಒದ್ದಾಡುತ್ತಿರುತ್ತಾರೆ. ರೋಗಿಯ ಊಟವನ್ನೇ ಇಬ್ಬರು ಹಂಚಿ ತಿನ್ನುವ ಅನಿವಾರ್ಯತೆ ಇರುತ್ತದೆ. ಬಡ ರೋಗಿಗಳ ಜತೆಗಾರರ ಹಸಿವು ನೀಗಿಸುವ ಕಾಯಕವನ್ನು ಎಂ.ಫ್ರೆಂಡ್ಸ್ ತಂಡ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಡಿಸಿ ಹೇಳಿದರು.
ಎಂ ಫ್ರೆಂಡ್ಸ್ ಇದರ ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದ್ರು. ಸಾವಿರ ದಿನಗಳಲ್ಲಿ ಯಾವುದೇ ರಜೆ ತೆಗೆದುಕೊಳ್ಳದೆ ಪ್ರತಿದಿನ ಕಾರುಣ್ಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಎಂ. ಫ್ರೆಂಡ್ಸ್ ಸಿಬ್ಬಂದಿ ಅಶ್ಫಾಕ್ ಮತ್ತು ಕ್ಯಾಟರಿಂಗ್ ಮಾಲೀಕ ಸೌಹಾನ್ ಎಸ್.ಕೆ. ಅವರನ್ನು ಅಭಿನಂದಿಸಲಾಯಿತು.ಎಂ.ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೌದಿ ಅರೇಬಿಯಾದ ಉದ್ಯಮಿ ಶರೀಫ್, ಐಎಂಎ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *