Header Ads
Breaking News

ವೀರಪ್ಪ ಮೊಯ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-  ಅಭಯಚಂದ್ರ ಜೈನ್ ಶ್ಲಾಘನೆ

ಮೂಡುಬಿದಿರೆ: ಸಿಇಟಿ ಜನಕ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕರಾವಳಿ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಡತನದಲ್ಲೆ ಬೆಳೆದು ಬಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ವೀರಪ್ಪ ಮೊಯಿಲಿಗೆ ಬಡವರ ಕಷ್ಟ ಏನು ಎಂಬುದು ಚೆನ್ನಾಗಿ ಅರಿವಿದೆ. ಅವರು ಜಾರಿಗೆ ತಂದಿದ್ದ ಸಿಇಟ ವ್ಯವಸ್ಥೆಯಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಎಂಜಿನಿಯರ್, ವೈದ್ಯರಾಗಿದ್ದಾರೆ ಎಂದರು. ಬಾಲ್ಯದಲ್ಲೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು ಬರಹಗಾರರಾಗಿ ಗುರಿತಿಸಿಕೊಂಡು ಜೈನ್ ಹೈಸ್ಕೂಲ್‌ನ ಕನ್ನಡ ಪಂಡಿತರಾಗಿದ್ದ ರಘುಚಂದ್ರ ಶೆಟ್ಟಿ ಅವರ ಪ್ರೀತಿಯ ವಿದ್ಯಾರ್ಥಿಯಾಗಿದ್ದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಪ್ರಶಸ್ತಿ ಪಡಕೊಂಡಿದ್ದರು.
ಕಾನೂನು ಪದವಿ ಮುಗಿಸಿ ರಾಜಕೀಯ ಪ್ರವೇಶಿಸಿದ್ದರು. ರಾಜಕೀಯದ ಒತ್ತಡಗಳ ಮಧ್ಯೆಯು ಬರವಣಿಗೆಗೆ ಸಮಯವನ್ನು ಬಳಸಿಕೊಂಡು ಕೊಟ್ಟ, ತೆಂಬರೆ, ಸಾಗರದೀಪ ಕೃತಿಗಳನ್ನು ರಚಿಸಿದ್ದಾರೆ. ರಾಮಾಯಣ ಮಹಾನ್ವೇಶಣಂ ಮಹಾಕಾವ್ಯ ರಚಿಸಿದ್ದರು. ಶ್ರವಣಬೆಳಗೋಳದ ಶ್ರೀಗಳ ಅನುಗ್ರಹದಿಂದ ಅವರು `ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯ ರಚಿಸಿದ್ದು ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ. ಈ ಕೃತಿಯನ್ನು ರಚಿಸುವ ಸಂದರ್ಭ ಅವರು ಮಾಂಸ ಆಹಾರವನ್ನು ತ್ಯಜಿಸಿದ್ದರು ಎಂದು ಅಭಯಚಂದ್ರ ನೆನಪಿಸಿಕೊಂಡರು. ಮೊಯಿಲಿ ಶುದ್ಧ ಹಸ್ತದ ರಾಜಕಾರಣಿಯಾಗಿ ಸರಳ ಜೀವನ ಶೈಲಿಯನ್ನು ಇಷ್ಟಪಟ್ಟವರು. ನನ್ನ ರಾಜಕೀಯ ಗುರು ವೀರಪ್ಪ ಮೊಯಿಲಿಯವರೆ ನನಗೆ ಆದರ್ಶ ಎಂದು ಅಭಯಚಂದ್ರ ಹೇಳಿದರು.

Related posts

Leave a Reply

Your email address will not be published. Required fields are marked *