Header Ads
Header Ads
Breaking News

ಎಂ.ಸಂಜೀವರ ಜೀವನ ಕಥನ ಪುಸ್ತಕ ಬಿಡುಗಡೆ

 

ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯ ಅವಿಭಜಿತ ಜನತಾದಳ ಮುಖಂಡರಾಗಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕದ್ರಿ ಎಂ.ಸಂಜೀವ ಅವರ ಜೀವನ ಕಥನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ರಾತ್ರಿ ಖಾಸಗಿ ಆಸ್ಪತ್ರೆಯ ವಾರ್ಡಿನಲ್ಲಿ ಬಿಡುಗಡೆ ಮಾಡಿದರು.ಮಂಗಳೂರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ರಾಜಕೀಯ ಸ್ನೇಹಿತ ಎಂ.ಸಂಜೀವ ಅವರ ಯೋಗ ಕ್ಷೇಮ ವಿಚಾರಿಸಲು ಆಗಮಿಸಿದರು. ಇದೇ ಸಂದರ್ಭದಲ್ಲಿ ಎಂ.ಸಂಜೀವ ಅವರ ಜೀವನ ಕಥನ ಸಂಜೀವನ ಜನನಾಯಕ ಎಂ.ಸಂಜೀವ ಅವರ ಜೀವನ ಕಥನ ಎಂಬ ಕೃತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಡುಗಡೆ ಮಾಡಿದರು.

ಎಂ.ಸಂಜೀವ ಅವರ ಸಹೋದರಿ ಸುಖಲಾಕ್ಷಿ ಸುವರ್ಣ ಅವರು ಅವರ ಜೀವನ ಚರಿತ್ರೆಯನ್ನು ಸಂಗ್ರಹಿಸಿದ್ದು, ದೇವೇಗೌಡ ಅವರು ಕೂಡ ಒಂದು ಅಧ್ಯಯನವನ್ನು ಬರೆದಿದ್ದಾರೆ.ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ದಂಪತಿಗಳು, ಯೆನೆಪೋಯ ಮೊಹಮ್ಮದ್ ಕುಂಞ, ಯುನಿಟಿ ಆಸ್ಪತ್ರೆಯ ಹಬೀಬ್ ರೆಹಮಾನ್, ಹಬೀಬ್ ಮೊಹಮ್ಮದ್ ಆಜ್ಮಾಲ್, ಪ್ರಜ್ವಲ್ ರೇವಣ್ಣ, ಜಾತ್ಯತೀತ ಜನತಾದಳ ಮುಖಂಡರಾದ ಮಹಮ್ಮದ್ ಕುಂಞ, ಎಂ.ಬಿ.ಸದಾಶಿವ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಎಂ.ಸಂಜೀವ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Related posts

Leave a Reply