Header Ads
Header Ads
Breaking News

ಎಐಟಿಯುಸಿ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ. ಮೋಟಾರು ಕಾಯ್ದೆ ತಿದ್ದುಪಡಿಗೆದುರಾಗಿ ಕಾರ್ಮಿಕರಲ್ಲಿ ಐಕ್ಯತೆ ಅಗತ್ಯ. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಜೋಯ್ ಜೋಸೆಪ್ ಹೇಳಿಕೆ.

ಮಂಜೇಶ್ವರ: ಕೇಂದ್ರ ಸರಕಾರ ಜ್ಯಾರಿಗೆ ತರಲು ಉದ್ದೇಶಿಸಿರುವ ಮೋಟಾರು ಕಾಯ್ದೆ ತಿದ್ದುಪಡಿಗೆದುರಾಗಿ ಕಾರ್ಮಿಕರು ಐಕ್ಯತೆಯನ್ನು ಕಾಪಾಡಿಕೊಳ್ಳಬೆಕೆಂಬುದಾಗಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜೋಯ್ ಜೋಸೆಫ್ ಕರೆ ನೀಡಿದರು.ಅವರು ಹೊಸಂಗಡಿಯಲ್ಲಿ ಪ್ರತ್ಯೇಕವಾಗಿ ಸಜ್ಜೀಕರಿಸಲಾದ ಸುಜನಪ್ರಿಯ ನಗರದಲ್ಲಿ ಬಾನುವಾರದಂದು ಬೆಳಿಗ್ಗೆ ನಡೆದ ಕಾಸರಗೋಡು ಜಿಲ್ಲಾ ಮೋಟಾರ್ ಹಾಗೂ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಇದರ ಜಿಲ್ಲಾ ವಾರ್ಷಿಕ ಸಮ್ಮೆಳನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರದ ಏಕಾಧಿಪತ್ಯ ನೀತಿಯಿಂದ ದೇಶದಲ್ಲಿ ಸಾರಿಗೆ ವಲಯ ತೀವೃವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರಕಾರ ಜ್ಯಾರಿಗೆ ತರುತ್ತಿರುವ ಹೊಸ ಹೊಸ ನೀತಿಗಳು ಸಾರಿಗೆ ವಲಯವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಒಟ್ಟಿನಲ್ಲಿ ಮೋಟಾರು ವಲಯದಲ್ಲಿ ಸಾಮಾನ್ಯ ಕಾರ್ಮಿಕರಿಗಿರುವ ಎಲ್ಲಾ ಅವಕಾಶಗಳು ಇಲ್ಲದಂತಾಗುವುದು ಖಚಿತವಾಗುತ್ತಿದೆ. ಇದರ ವಿರುದ್ದ ಸೆಟೆದು ನಿಲ್ಲಲು ಕಾರ್ಮಿಕರೆಲ್ಲರೂ ಒಂದಾಗಬೇಕಾಗಿದೆ. ಎಂಬುದಾಗಿ ಅವರು ಕರೆಯಿತ್ತರು.ಬಳಿಕ ಅಧ್ಯಕ್ಷ ಬಾಷಣಗೈದ ಬಿ ವಿ ರಾಜನ್ ಮಾತನಾಡಿ ಕಳೆದ ಐದು ವರ್ಷಗಳ ಹಿಂದೆ ಮಂಜೇಶ್ವರದಲ್ಲಿ ಬಲರಂಗದ ಕಾರ್ಮಿಕ ಸಂಘಟನೆಗಳು ಮಾತ್ರ ಇದ್ದ ಸಂದರ್ಭ ಇದೀಗ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿರುವ ಎಂ ಡಿ ಮುಸ್ತಫ ಕಡಂಬಾರು ರವರ ಪ್ರಯತ್ನದಿಂದ ಮಂಜೇಶ್ವರದಲ್ಲಿ ಎಡರಂಗದ ಎಐಟಿಯುಸಿ ಕಾರ್ಮಿಕ ಸಂಘಟನೆ ಚಾಲ್ತಿಗೆ ಬಂದಿದೆ. ಇದೀಗ ಅದೇ ನಗರದಲ್ಲಿ ನಾವು ಈ ಸಲ ಸಮ್ಮೇಳನವನ್ನು ಕೂಡಾ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರು ಇನ್ನಷ್ಟು ಚುರುಕುನಿಂದ ಕಾರ್ಯಪ್ರವೃತರಾಗಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಹೋರಾಟದ ಮೂಲಕ ತಮ್ಮ ಅವಕಾಶವನ್ನು ಪಡೆಯುವಂತೆ ಕರೆಯಿತ್ತರು.ನಿರುದ್ಯೋಗಿ ಯುವಕರು ಆರಂಭಿಸಿದ ಡ್ರೈವಿಂಗ್ ಶಾಲೆಗಳು ಕಾರ್ಪರೇಟರ್ ಪಾಲಾಗುವುದರಿಂದ ರಕ್ಷಿಸಬೇಕು, ವಾಹನಗಳ ಬಿಡಿ ಭಾಗಗಳ ಮಾರಾಟ ಲೈಸನ್ಸನ್ನು ಕಾರ್ಪರೇಟರುಗಳಿಗೆ ನೀಡುವುದನ್ನು ತಡೆಯಬೇಕು, ಮೋಟಾರು ವಾಹನ ನಿಯಮದಲ್ಲಿ ಹಸ್ತಕ್ಷೇಪ ಮಾಡಬಾರದು, ಸಾಮಾನ್ಯ ಕಾರ್ಮಿಕನಿಗೆ ರಕ್ಷಣೆ ನೀಡಬೇಕು ಮೊದಲಾದ ಬೇಡಿಕೆಗಳು ಸಮ್ಮೇಳನದಲ್ಲಿ ಕೇಳಿ ಬಂತು. ನೇತಾರರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡರು.

Related posts

Leave a Reply