Header Ads
Breaking News

ಎಐವೈಎಫ್ ಪ್ರತಿನಿಧಿ ಸಮ್ಮೇಳನ : ಹೊಸಂಗಡಿ ಗೇಟ್ ವೇ ಹಾಲ್‌ನಲ್ಲಿ ಆಯೋಜನೆ

ಅಖಿಲ ಭಾರತ ಯುವಜನ ಒಕ್ಕೂಟದ ಮಂಜೇಶ್ವರ ಮಂಡಲ ಪ್ರತಿನಿಧಿ ಸಮ್ಮೇಳನ ಹೊಸಂಗಡಿ ಗೇಟ್‌ವೇ ಹಾಲ್ ನಲ್ಲಿ ಜರುಗಿತು.ಎ ಐ ವೈ ಎಫ್ ಮಂಡಲಾಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್ ಧ್ವಜಾರೋಹಣ ಗೈಯುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರಕಿತು.. ಎ.ಐ.ವೈ.ಎಫ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಿಜು ಉಣ್ಣಿತ್ತಾನ್ ಪ್ರತಿನಿಧಿ ಸಮ್ಮೇಳನವನ್ನು ಉದ್ಘಾಟಿಸಿದರು.

ಎ ಐ ವೈ ಎಫ್ ಮಂಜೇಶ್ವರ ಮಂಡಲ ಕಾರ್ಯದರ್ಶಿ ಹರೀಶ್.ಕೆ.ಆರ್ ಕಡಂಬಾರ್ ವರದಿ ಮಂಡಿಸಿದರು. ಸಿಪಿಐ ಮಂಜೇಶ್ವರ ಮಂಡಲ ಸಹಕಾರ್ಯದರ್ಶಿ ಎಸ್.ರಾಮಚಂದ್ರ, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಎ ಐ ವೈ ಎಫ್ ಜಿಲ್ಲಾ ನೇತಾರ ಸನೋಜ್ ಕಾಡಗ ನೇತೃತ್ವ ವಹಿಸಿದ್ದರು. ಬಳಿಕ 15 ಮಂದಿಯ ನೂತನ ಮಂಡಲ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ದಯಾಕರ ಮಾಡ, ಕಾರ್ಯದರ್ಶಿಯಾಗಿ ಅಜಿತ್ ಎಂ ಸಿ ಯವರನ್ನು ಆಯ್ಕೆ ಮಾಡಲಾಯಿತು.

 

Related posts

Leave a Reply

Your email address will not be published. Required fields are marked *