Header Ads
Header Ads
Breaking News

ಎಒಎಮ್‌ಐಸಿ-ಕೋಮ್‌ಸ್ಕೋನ್ ೨೦೧೭ ರಾಜ್ಯ ಸಮ್ಮೇಳನ

ಮಂಗಳೂರಿನ ಕುಂಟಿಕಾನದಲ್ಲಿರುವ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ವತಿಯಿಂದ ೭ನೇ ಕರ್ನಾಟಕ ರಾಜ್ಯ ಸಮ್ಮೇಳನ ಎಒಎಮ್‌ಐಸಿ-ಕೋಮ್‌ಸ್ಕೋನ್ ೨೦೧೭ರ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಎಒಎಮ್‌ಐಸಿ-ಕೋಮ್‌ಸ್ಕೋನ್ ೨೦೧೭ ರಾಜ್ಯ ಸಮ್ಮೇಳನವು ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗುತ್ತಿದ್ದು ಆಗಸ್ಟ್ ೧೦ರಿಂದ ೧೨ರ ವರೆಗೆ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮವನ್ನು ನಿಟ್ಟೆ ಯುನಿವರ್ಸಿಟಿಯ ವಯ್ಸ್ ಚಾನ್ಸಲರ್ ಡಾ. ಎಸ್. ರಮಾನಂದ ಶೆಟ್ಟಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಇದರಿಂದ ಮೆಡಿಕಲ್ ಸಯನ್ಸ್ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿ ಎಂದು ಹೇಳಿದರು. [ಬೈಟ್]
ಅನಂತರ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎ.ಜೆ ಶೆಟ್ಟಿ ಮಾತನಾಡಿ, ಮೂರು ದಿನಗಳ ಕಾಲ ಎಒಎಮ್‌ಐಸಿ-ಕೋಮ್‌ಸ್ಕೋನ್ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದ ಅವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ವಯ್ಸ್ ಪ್ರಸಿಡೆಂಟ್ ಪ್ರಶಾಂತ್ ಶೆಟ್ಟಿ, ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್‌ನ ಡೀನ್ ಡಾ. ವೈ, ಭರತ್ ಶೆಟ್ಟಿ, ಎಂಎಮ್‌ಎಸ್‌ಐನ ಅಧ್ಯಕ್ಷರಾದ ಡಾ. ಆರ್ ಎಸ್. ನೀಲಕಂದನ್. ಡಾ. ಕೆ. ಗೋಪಾಲಕೃಷ್ಣ, ಡಾ. ಬಿ.ಎಚ್. ಶ್ರೀಪತಿ ರಾವ್, ಡಾ. ಪ್ರೀತಮ್ ಎನ್ ಶೆಟ್ಟಿ,ಡಾ. ಮಂಜುನಾಥ್ ರೈ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply