Header Ads
Header Ads
Breaking News

ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದ ಕರಾವಳಿಯ ಯುವಕ

ಕಾಗದವನ್ನು ಕತ್ತರಿಸಿ ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸಿದ ಕಡಬ ತಾಲೂಕಿನ ನೆಲ್ಯಾಡಿಯ ಯುವಕನೋರ್ವ “ಎಕ್ಸ್‍ಕ್ಲೂಸಿವ್ ವಲ್ರ್ಡ್ ರೆಕಾಡ್ರ್ಸ್” ನಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದಾರೆ.


ಸ್ಟೆನ್ಸಿಲ್ ಚಾಕು ಹಿಡಿದು ಪೇಪರನ್ನು ಕೊರೆದು (ಸ್ಟೆನ್ಸಿಲ್ ಕಟ್) ಕಲಾ ಪ್ರಪಂಚವೇ ಬೆರಗಾಗುವಂತೆ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಿತ್ ನೆಲ್ಯಾಡಿ ಕೇವಲ 3 ನಿಮಿಷ 12 ಸೆಕೆಂಡುಗಳ ಅವಧಿಯಲ್ಲಿ ಬಿಳಿ ಮತ್ತು ಕಪ್ಪು ಕಾಗದದ ಹಾಳೆಯನ್ನು ಬಳಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪೇಪರ್ ನಲ್ಲಿ ಮೂಡಿಸಿ ಎಕ್ಸ್‍ಕ್ಲೂಸಿವ್ ವಲ್ರ್ಡ್ ರೆಕಾಡ್ರ್ಸ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದಿಂದ ಒಟ್ಟು ಮೂವರು ಭಾಗವಹಿಸಿದ್ದು, ಅದರಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಪ್ರಧಾನಿ ನರೇಂದ್ರಮೋದಿ ಮಾತ್ರವಲ್ಲದೇ ಹಲವಾರು ವಿಶಿಷ್ಟ ಚಿತ್ರ ಬಿಡಿಸುವಲ್ಲಿ ಈ ಗ್ರಾಮೀಣ ಪ್ರತಿಭೆ ಅಗ್ರಗಣ್ಯ.

Related posts

Leave a Reply

Your email address will not be published. Required fields are marked *