Header Ads
Header Ads
Breaking News

ಎಚ್-೧ಬಿ ವೀಸಾ ಭಾರತೀಯ ಐಟಿಗೆ ಅನಿವಾರ್ಯವಲ್ಲ, ಇನ್ಫೋಸಿಸ್ ಸಿ‌ಎ‌ಒ ವಿಶಾಲ್ ಸಿಕ್ಕಾ

ಭಾರತದ ಮಾಹಿತಿ ತಂತ್ರಜ್ಞಾನ ಉದ್ದಿಮೆಯು ತನ್ನ ವಹಿವಾಟಿಗಾಗಿ ಅಮೆರಿಕದ ಎಚ್-೧ಬಿ ವೀಸಾ ಅವಲಂಬಿಸಿದೆ ಎನ್ನುವುದನ್ನು ಇನ್ಫೊಸಿಸ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶಾಲ್ ಸಿಕ್ಕಾ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
ಹಿಂದಿನ ೧೦ ವರ್ಷಗಳ ಅಂಕಿ ಅಂಶಗಳನ್ನೆ ಲೆಕ್ಕಕ್ಕೆ ತೆಗೆದುಕೊಂಡರೆ ಈ ಗ್ರಹಿಕೆ ಸುಳ್ಳು ಎನ್ನುವುದು ಸಾಬೀತಾಗುತ್ತದೆ. ಪ್ರತಿ ವರ್ಷ ೬೫ ಸಾವಿರದಷ್ಟು ವೀಸಾಗಳನ್ನು ನೀಡಲಾಗಿದೆ ಎಂದು ಭಾವಿಸಿದರೂ, ೬.೫೦ ಲಕ್ಷ ವೀಸಾ ವಿತರಿಸಲಾಗಿದೆ ಎಂದರ್ಥ. ಈ ಅವಧಿಯಲ್ಲಿ ದೇಶಿ ಐಟಿ ಸಂಸ್ಥೆಗಳು ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ. ಇನ್ಫೊಸಿಸ್ ಒಂದರಲ್ಲಿಯೇ ೨ ಲಕ್ಷ ಉದ್ಯೋಗಿಗಳು ಇದ್ದಾರೆ. ಟಿಸಿ‌ಎಸ್ ಸಂಖ್ಯೆ ಇದರ ಎರಡು ಪಟ್ಟು ಇದೆ. ಹೀಗಾಗಿ ಐಟಿ ಸಂಸ್ಥೆಗಳು ತಮ್ಮ ವಹಿವಾಟು ವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿ ವಿಷಯದಲ್ಲಿ ಅಮೆರಿಕದ ವೀಸಾಗಳನ್ನೆ ಅವಲಂಬಿಸಿದೆ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ.
ಅಮೆರಿಕದ ಸಂಸ್ಥೆಗಳು ವೀಸಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ವಿದೇಶಿ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಿರುವುದರ ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತವು ಕಠಿಣ ಕ್ರಮ ಕೈಗೊಂಡಿದೆ. ಅಮೆರಿಕದಲ್ಲಿನ ಉದ್ಯೋಗ ಅವಕಾಶಗಳು ಬೇರೆಯವರ ಪಾಲಾಗಬಾರದು ಎನ್ನುವ ಕಾರಣಕ್ಕೆ ವೀಸಾ ನಿಯಮಗಳನ್ನು ಕಠಿಣಗೊಳಿಸಿದೆ. ಇದರಿಂದ ಟಿಸಿ‌ಎಸ್, ಇನ್ಫೊಸಿಸ್, ವಿಪ್ರೊ ಸಂಸ್ಥೆಗಳ ವಹಿವಾಟಿಗೆ ಧಕ್ಕೆ ಒದಗಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಸಿಕ್ಕಾ?ಅವರು ಅಂತಹ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

Related posts

Leave a Reply