Header Ads
Header Ads
Breaking News

ಎಜೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಎಜೆ ಹೆಲ್ತ್ ಕಾರ್ಡ್ ವಿತರಣೆ

ಮಂಗಳೂರಿನ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ವಿಶ್ವ ರಕ್ತದಾನ ದಿನಾಚರಣೆಯ ಪ್ರಯುಕ್ತ ಸಂಪೂರ್ಣ ಸ್ವಯಂಚಾಲಿತ ಇಮ್ಯುನೊ ಹೆಮಟಾಲಜಿ ವಿಶ್ಲೇಷಕ ಯಂತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಎಜೆ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟಿಬಿ ಹಾಗೂ ಡಿಎಪಿಸಿಯು ಅಧಿಕಾರಿ ಡಾ. ಬದ್ರುದ್ದಿನ್ ಎಂ.ಎನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವಕರು ರಕ್ತದಾನ ಮಾಡುವ ವಿಚಾರದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು. ಅದು ಸಮುದಾಯ ಹಾಗೂ ಸಮಾಜಕ್ಕೆ ಉಪಯುಕ್ತ ಎಂದು ಹೇಳಿದರು.ಎಜೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಎಜೆ ಶೆಟ್ಟಿಯವರು ಮಾತನಾಡಿ, ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಬೇರೊಬ್ಬರ ಜೀವ ಉಳಿಸಲಾಗುತ್ತದೆ. ಇನ್ನು ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದರು.    ಇನ್ನು ಕಾರ್ಯಕ್ರಮದಲ್ಲಿ ಆರೋಗ್ಯ ಹೆಲ್ತ್ ಕಾರ್ಡ್‌ನ್ನು ಬಿಡುಗಡೆಗೊಳಿಸಿ ವಿತರಿಸಲಾಯಿತು.ಪ್ರಸ್ತಾವಿಕ ಮಾತುಗಳನ್ನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ಮಾರ್ಲಾ ಅವರು ಸಾರ್ವಜನಿಕರಲ್ಲಿ ರಕ್ತದಾನದ ಅರಿವು ಮೂಡಿಸುವಲ್ಲಿ ಯಶಸ್ವಿಯಾದರೆ ರಕ್ತದಕೊರತೆಯಾಗಲು ಸಾಧ್ಯವಿಲ್ಲ ಎಂದು ಹೇಳೀದರು.ಇದೇ ವೇಳೆ ದಾನಿಗಳು ರಕ್ತದಾನದಲ್ಲಿ ಪಾಲ್ಗೊಂಡರು. ಜೂನ್ 14ರಿಂದ 20ರ ವರೆಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಅವಕಾಶವಿದೆ. ಅದಕ್ಕಾಗಿ ರಕ್ತದಾನಿಗಳ ವೀಕ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಎಜೆ ಆಸ್ಪತ್ರೆಯ ನಿದೇರ್ಶಕ ಎ. ಪ್ರಶಾಂತ್ ಶೆಟ್ಟಿ, ಮುಂಬಯಿಯ ಓರ್ತೋ ಕ್ಲಿನಿಕಲ್‌ನ ಜನರಲ್ ಮ್ಯಾನೇಜರ್ ಕೃಷ್ಣ ಮೂರ್ತಿ, ಎಜೆಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಡೀನ್ ಡಾ ಅಶೋಕ್ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply