Header Ads
Breaking News

ಎಜೆ ಇನ್‍ಸ್ಟಿಟ್ಯೂಟ್‍ನಲ್ಲಿ ಜಿಲ್ಲಾ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯಿಂದ ವರ್ಲ್ಡ್ ಕ್ರಾಸ್ ಡೇ-2019 ಕಾರ್ಯಕ್ರಮ

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕ ಮತ್ತು ಯೂತ್ ರೆಡ್ ಕ್ರಾಸ್ ವಿಂಗ್, ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ವಲ್ರ್ಡ್ ರೆಡ್ ಕ್ರಾಸ್ ಡೇ-2019 ಕಾರ್ಯಕ್ರಮವು ಕುಂಟಿಕಾನ ಎಜೆ ಇನ್‍ಸ್ಟಿಟ್ಯೂಟ್‍ನ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು ರೆಡ್‍ಕ್ರಾಸ್ ಯಾವ ರೀತಿಯಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸ್ತಾ ಇದೆ, ಏನೆಲ್ಲಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎನ್ನುವುದರ ಕುರಿತಾಗಿ ಮಾಹಿತಿಯನ್ನು ನೀಡಿದ್ರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ಸಿಎ ಶಾಂತರಾಮ್ ಶೆಟ್ಟಿಯವರು ಮಾತನಾಡಿ, ರೆಡ್‍ಕ್ರಾಸ್ ಎಂಬ ಸಂಘಟನೆ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿಕೊಂಡು ಬಂದಿದೆ. ಒಟ್ಟು ದೇಶದಲ್ಲಿ 700 ಶಾಖೆಗಳಿದ್ದು 17 ಮಿಲಿಯನ್ ಸ್ವಯಂ ಸೇವಕರಿದ್ದಾರೆ. ಈ ಮೂಲಕ ಉತ್ತಮ ಸೇವೆಯನ್ನು ನೀಡ್ತಾ ಬಂದಿದ್ದಾರೆ ಎಂದು ರೆಡ್ ಕ್ರಾಸ್ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ದಿವ್ಯಾಂಗರಿಗೆ ವೀಲ್ ಚೇರ್‍ನ್ನು ವಿತರಿಸಲಾಯಿತು. ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಲಕ್ಷ್ಮೀ ಮೆಮೋರಿಯಲ್ ಎಡುಕೇಶನ್ ಟ್ರಸ್ಟ್‍ನ ಪ್ರಾಂಶುಪಾಲರಾದ ಡಾ. ಲಾರಿಸ್ಸಾ ಮಾರ್ಥಾ ಸಾಮ್ಸ್, ರೆಡ್‍ಕ್ರಾಸ್‍ನ ಉಪಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಶರ್ಮ, ಸಂಯೋಜಕರಾದ ಶಾಂಭವಿ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *