Header Ads
Breaking News

ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ನಿಧನ

ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ (76) ಶನಿವಾರ ರಾತ್ರಿ 12.45ರ ಸುಮಾರಿಗೆ ಇಹಲೋಕ ತ್ಯಜಿಸಿದರು.

ಧಾರ್ಮಿಕವಾಗಿ ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು.ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು. ಕರಾವಳಿಯ ಪ್ರಸಿದ್ದ ಯಕ್ಷಗಾನದ ಮೇಲೆ ವಿಶೇಷ ಒಲವಿದ್ದ ಶ್ರೀಗಳು, ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಇತ್ತೀಚೆಗಷ್ಟೆ ಶ್ರೀಗಳು 60 ನೇ ಚಾತುರ್ಮಾಸ್ಯ ವ್ರತ ಪೂರೈಸಿದ್ದರು.

ವಿಶೇಷವೆಂಬಂತೆ ಸಂವಿಧಾನದ ಮೂಲ ಆಶಯಗಳಿಗೆ ಸಂಬಂಧಿಸಿದ ಮಹತ್ತರ ಸಂವಿಧಾನ ನೂತನ ತಿದ್ದುಪಡಿಗೆ ಕಾರಣವಾದ1970ರ ಮಾ.21ರ ಶ್ರೀಕೇಶವಾಶನಂದ ಭಾರತಿ ಆ್ಯಕ್ಟ್ ಜಾರಿಗೆ ಬರುವಲ್ಲಿ ದೇಶದಲ್ಲೇ ಗಮನಸೆಳೆದವರು. ಭಾರತದ ಇತಿಹಾಸದಲ್ಲಿ ಶ್ರೀಕೇಶವಾನಂದ ಭಾರತೀ ವರ್ಸಸ್ ಕೇರಳ ಸರ್ಕಾರ ದಾವೆ ಸಂವಿಧಾನ ತಿದ್ದುಪಡಿ ಮೇಲಿನ ಇತಿಮಿತಿಗಳ ನಿಯಂತ್ರಣದ ಬಗ್ಗೆ ಉಲ್ಲೇಖಿಸಿರುವುದಾಗಿದೆ.ಭೂ ಮಸೂದೆ ಕಾಯಿದೆ ಜಾರಿಗೆ ಬಂದ ವೇಳೆ ಅಂದಿನ ಕೇರಳ ಸರಕಾರ ಮಠದ ಭೂಮಿ ವಶಪಡಿಸಲು ಯತ್ನಿಸಿತ್ತು. ಆದರೆ ಎಡನೀರು ಶ್ರೀಗಳು ಸುಪ್ರೀಂ ಕೋರ್ಟ್‌ನಲ್ಲಿ ಮಠದ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದಾವೆ ಹೂಡಿದಾಗ, ಆಗಿನ 12 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ಅವರ ವಾದ ಎತ್ತಿ ಹಿಡಿದು ಆದೇಶ ನೀಡಿತ್ತು. ಇದು ಕೇಶವನಾಂದ ಭಾರತಿಶ್ರೀ ಹಾಗೂ ಕೇರಳ ಸರಕಾರ ಆ್ಯಕ್ಟ್ ಎಂದು ಖ್ಯಾತವಾಗಿದೆ. ಸದ್ಯ ಎಡನೀರು ಮಠದ ಅಂಕೆಯಲ್ಲಿ ಶಾಲೆ, ಕಾಲೇಜು, ಕಲಾ ತಂಡಗಳು ಮತ್ತು ಗೋಶಾಲೆ, ಕೃಷಿ ತೋಟಗಳು ನಿರ್ವಹಿಸಲ್ಪಡುತ್ತಿವೆ.

Related posts

Leave a Reply

Your email address will not be published. Required fields are marked *