Header Ads
Header Ads
Breaking News

ಎನ್‌ಎಂಪಿಟಿಯಲ್ಲಿ ಹೆಲಿ ಟೂರಿಸಂಗೆ ಚಾಲನೆ : ವೈಮಾನಿಕ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಸದಾವಕಾಶ

ದೇಶದಲ್ಲೇ ಪ್ರಥಮ ಬಾರಿಗೆ ಎನ್ನಲಾದ ಹೆಲಿ ಟೂರಿಸಂಗೆ ಎನ್.ಎಂ.ಪಿ.ಟಿಯಲ್ಲಿ ಇಂದು ಚಾಲನೆ ನೀಡಲಾಯಿತು. ಎನ್.ಎಂ.ಪಿ.ಟಿ ಅಧ್ಯಕ್ಷ ಎ.ವಿ. ರಮನ್ ಅವರು ಉಪಸ್ಥಿತರಿದ್ದು, ಇಂದು ಮಂಗಳೂರು ಬಂದರಿಗೆ ಆಗಮಿಸಿದ ಪ್ರವಾಸಿ ಹಡಗು ’ಐಡವಿಟ’ ಪ್ರವಾಸಿಗರನ್ನು ಸ್ವಾಗತಿಸಿದರು. ಹೆಲಿ ಟೂರಿಸಂ ಮೂಲಕ ಪ್ರವಾಸಿಗರು ಎನ್.ಎಂ.ಪಿ.ಟಿಯಿಂದ ಹೆಲಿಕಾಪ್ಟರ್ ಮೂಲಕ ಬೇಕಲ್ ಪೋರ್ಟ್, ಮೂಡುಬಿದಿರೆಯ ಸಾವಿರ ಕಂಬ ಬಸದಿ, ಚಿಕ್ಕಮಂಗಳೂರಿನ ವೈಮಾನಿಕ ಪ್ರದೇಶಗಳಿಗೆ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದರು. ನ.೧೫ರಂದು ವಿದೇಶದಿಂದ ಹಡಗಿನಲ್ಲಿ ಆಗಮಿಸುವ ಪ್ರವಾಸಿಗರು ಹೆಲಿ ಟೂರಿಸಂಗೆ ಬುಕ್ ಮಾಡಿರುತ್ತಾರೆ. ಸದ್ಯ ಹೆಲಿಕಾಪ್ಟರ್ ಮಂಗಳೂರು ಹಾಗು ನೆರೆಯ ಜಿಲ್ಲೆಗಳ ಸೌಂದರ್ಯವನ್ನು ತೋರ್ಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *