Header Ads
Header Ads
Breaking News

ಎನ್‌ಎಂಪಿಟಿಯ ದಕ್ಷಿಣ ಬ್ರೇಕ್‌ವಾಟರ್‌ನಲ್ಲಿ ಮೀನಿಗೆ ಗಾಳ ಸ್ಪರ್ಧೆ

ಮಂಗಳೂರು ಮೂಲದ ಗಿಫ್ಟೆಡ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಎನ್‌ಎಂಪಿಟಿ, ಮಂಗಳೂರು ಆಯಂಗ್ಲರ್ ಕ್ಲಬ್, ಅಖೀಲ ಭಾರತೀಯ ಗೇಮ್ ಫಿಶಿಂಗ್ ಅಸೋಸಿಯೇಶನ್ ಸಹಯೋಗದೊಂದಿಗೆ ಮೀನಿಗೆ ಗಾಳ ಹಾಕುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನ. ೨೪ ಹಾಗೂ ೨೫ರಂದು ಎನ್‌ಎಂಪಿಟಿಯ ದಕ್ಷಿಣ ಬ್ರೇಕ್‌ವಾಟರ್ನಲ್ಲಿ ನಡೆಯಲಿದೆ.

ನಗರದ ಭಾರತ್‌ಮಾಲ್‌ನ ಡೆಕತ್ಲಾನ್ ಶೋರೂಂನಲ್ಲಿ ಗುರುವಾರ ಶಾಸಕ ವೇದವ್ಯಾಸ್ ಕಾಮತ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಕಳೆದ ವರ್ಷ ಮಂಗಳೂರಿನಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಗಾಳ ಹಾಕುವ ಸ್ಪರ್ಧೆಗೆ ಅನೇಕ ರಾಜ್ಯ ಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಇದರ ಸ್ಫೂರ್ತಿಯೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಆಯೋಜನೆಗೊಂಡಿದೆ.

ಎನ್‌ಎಂಪಿಟಿ ಟ್ರಾಫಿಕ್ ಮ್ಯಾನೇಜರ್ ವೈ.ಆರ್. ಬೆಳಗಲ್, ಡೋಕ್ ಮಾಸ್ಟರ್ ಕ್ಯಾ| ಗೌರವ್ ಮಥೂರ್, ಪ್ರಮುಖರಾದ ಡಾ| ಶಿವಕುಮಾರ್ ಮಗದ, ನಿತಿನ್ ಮ್ಯಾಥ್ಯೂಸ್, ಡೇವಿಡ್, ಆಲ್ ಇಂಡಿಯಾ ಗೇಮ್ ಫಿಶಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಡೆರೆಕ್ ಡಿ’ಸೋಜಾ, ಮಂಗಳೂರು ಆಯಂಗ್ಲರ್ ಕ್ಲಬ್ ಅಧ್ಯಕ್ಷ ಶಮೀರ್ ಕೋಟೆಕಾರ್, ಗಿಫ್ಟೆಡ್ ಇಂಡಿಯಾ ಆಯೋಜಕರಾದ ಅನೂಪ್ ಕಾಂಚನ್, ಕೇತನ್ ಕಾಂಚನ್ ಉಪಸ್ಥಿತರಿದ್ದರು.

Related posts

Leave a Reply