Header Ads
Header Ads
Breaking News

ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ. ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಆಯೋಜನೆ.

ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಎನ್‌ಎಸ್‌ಎಸ್ ನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಗೀತಾ ಎಸ್‌ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯ್ ಕುಮಾರ್ ಎಮ್.ಎ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಯಾಗಿರುವಾಗ ಅಧ್ಯಾಪಕರಿಂದ ಏನೆಲ್ಲಾ ನಿರೀಕ್ಷೆಗಳನ್ನು ಅಪೇಕ್ಷಿಸುತ್ತಿದ್ದೆನೋ, ಅದನ್ನು ಅಧ್ಯಾಪಕನಾಗಿ ಮಾಡಬೇಕು ಎನ್ನುವ ದೃಷ್ಠಿಯಿಂದ ಕೆಲಸವನ್ನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಪ್ರತಿಮಾ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾನ ವಿಧಿ ಬೋಧಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ವಾಲ್ಪಾಡಿ ಗ್ರಾಮಪಂಚಾಯತ್‌ನ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಎನ್‌ಎಸ್‌ಎಸ್ ಕಾರ್ಯಾಧಿಕಾರಿ ವಿಶ್ವ ಜಿಎಮ್, ಕೋಟಿ ಬಿ, ಎನ್‌ಎಸ್‌ಎಸ್ ಉಪಾಧಿಕಾರಿಗಳಾದ ರಾಘವೇಂದ್ರ, ದೀಪಿಕಾ ಆಳ್ವ, ಸೌಮ್ಯಶ್ರೀ, ಕೀರ್ತಿ, ಕರೆಸ್ಪಂಡೆಂಟ್ ಕೃಷ್ಣ ಪ್ರಸಾದ್ ರೈ, ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಮನೋಜ್ ಕೋಟಿಯಾನ್, ಸುಶ್ಮಿತಾ, ಅಭಿಷೇಕ್, ಕಾವ್ಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply