Breaking News

ಎನ್‌ಐಟಿಕೆ ಟೋಲ್ ರದ್ದುಪಡಿಸದಿದ್ದಲ್ಲಿ ಪ್ರತಿಭಟನೆ, ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆ

ಸುರತ್ಕಲ್‌ನ ಎನ್‌ಐಟಿಕೆ ಟೋಲ್ ಇನ್ನು ಒಂದು ತಿಂಗಳಲ್ಲಿ ರದ್ದುಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಆರಂಭಿಸುವುದಾಗಿ ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆ ನೀಡಿದರು.
ಹೆಜಮಾಡಿ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹ ಆರಂಭವಾದ ಬಳಿಕ ಎನ್‌ಐಟಿಕೆ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹ ರದ್ದುಪಡಿಸುವುದಾಗಿ ಇಲ್ಲಿನ ಸಂಸದರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ನೀಡಿದ ಭರವಸೆಯ ಪ್ರಕಾರ ಇಲ್ಲಿನ ಟೋಲ್ ಕೇಂದ್ರಗಳಲ್ಲಿ ಟೋಲ್ ಸಂಗ್ರಹ ಒಂದು ತಿಂಗಳಲ್ಲಿ ರದ್ದುಪಡಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಪ್ರತಿಭಟನೆ ಆರಂಭಿಸುವುದಾಗಿ ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆಯನ್ನು ನೀಡಿದರು. ಹೆಜಮಾಡಿ ಟೋಲ್ ಕೇಂದ್ರ ಆರಂಭವಾದ ಬಳಿಕ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಮೂರು ಟೋಲ್‌ಗಳು ಬರುತ್ತಿರುವುದು ನಿಜ ಎಂದರು.

Related posts

Leave a Reply