Header Ads
Header Ads
Header Ads
Breaking News

ಎನ್‌ಫಿಲ್ಡ್ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬುಲೆಟ್ ಬೈಕ್ ಮಾರುಕಟ್ಟೆಗೆ ಮಂಗಳೂರಿನ ಬಲ್ಲಾಳ್ ಬಾಗ್‌ನ ಶೋ ರೂಂನಲ್ಲಿ ಬಿಡುಗಡೆ ಸಮಾರಂಭ

ಮಂಗಳೂರಿನ ಬಲ್ಲಾಳ್ ಬಾಗ್ ಸಮೀಪದಲ್ಲಿರುವ ಪ್ರಂಟ್ ಲೈನ್ ಆಟೋ ಮೊಬೈಲ್ ಹಾಗೂ ರಾಯಲ್ ಎನ್‌ಫಿಲ್ಡ್‌ನಲ್ಲಿ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬುಲೆಟ್ ಬೈಕ್ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು.

ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ಕ್ರೇಝ್ ಮೂಡಿಸುವಂತಿರುವ ಬೈಕ್‌ಗಳಲ್ಲಿ ರಾಯಲ್ ಎನ್‌ಫಿಲ್ಡ್ ಒಂದು ಕೂಡ ಹೌದು.. ತನ್ನ ಶಬ್ಧದಿಂದಲೇ ಇತರನ್ನು ಮೋಡಿ ಮಾಡುತ್ತಿರುವ ಬೈಕ್ ಎಲ್ಲಾರ ಮನಗೆದ್ದಿದೆ.

ಇದೀಗ ಹೊಸದೊಂದು ಶೈಲಿಯ ಬೈಕ್ ಮಾರುಕಟ್ಟೆಗೆ ಬಂದಿದೆ. ನಗರದ ಬಲ್ಲಾಳ್ ಬಾಗ್ ಸಮೀಪದಲ್ಲಿರುವ ಪ್ರಂಟ್ ಲೈನ್ ಆಟೋ ಮೊಬೈಲ್ ಹಾಗೂ ರಾಯಲ್ ಎನ್‌ಫಿಲ್ಡ್‌ನಲ್ಲಿ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬುಲೆಟ್ ಬೈಕ್ ಅದ್ಧೂರಿಯಾಗಿ ಮಾರುಕಟ್ಟೆ ಬಿಡುಗಡೆಗೊಂಡಿದೆ. ಇದನ್ನು ಗ್ರಾಹಕ ಪ್ರವೀಣ್ ಡಿಸೋಜಾ ಹಾಗೂ ಜ್ವಾಲಿಲೈನ್ ಡಿಸೋಜಾ ಬಿಡುಗಡೆಗೊಳಿಸಿದ್ರು.

ಇನ್ನೂ ರಾಯಲ್ ಎನ್‌ಫಿಲ್ಡ್ ಕ್ಲಾಸಿಕ್ ೩೫೦ ಗನ್‌ಮೆಟಲ್ ಗ್ರೇ ಬುಲೆಟ್ ಬೈಕ್ ಯುವಸಮುದಾಯಕ್ಕೆ ಹೇಳಿ ಮಾಡಿಸಿದಂತಿದೆ. ಈ ಸಮುದಾಯಕ್ಕೆ ನೆಚ್ಚಿನ ಬೈಕ್ ಅದ್ದರಿಂದಲೇ ಹೊಸ ಹೊಸ ಶೈಲಿ ಬೈಕ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತಿದ್ದಾರೆ. ಅಲ್ಲದೇ ಯುವ ಸಮುದಾಯವನ್ನು ಸೆಳೆಯಲು ಇನ್ನಿತರ ಬೈಕ್‌ಗಳು ಮಾರುಕಟ್ಟೆಗೆ ಬಂದರೂ, ರಾಯಲ್ ಎನ್‌ಫಿಲ್ಡ್ ಖದರ್ ಇನ್ನೂ ಕಮ್ಮಿಯಾಗಿಲ್ಲ ಎಂದು ಗ್ರಾಹಕರು ಹೇಳ್ತಾರೆ  ಇನ್ನೂ ಬೈಕ್ ವಿಶೇಷ ಅಂದ್ರೆ ಸಿಗಲ್ ಸಿಲಿಂಡರ್, 4 ಸ್ಟ್ರೋಕ್, ಟ್ವಿನ್ಸ್‌ಸ್ಪಾರ್ಕ್, ಎರ್‌ಕೂಲರ್ , 364 ಸಿಸಿ ಇಂಜಿನ್ ಹೊಂದಿದೆ. ಇನ್ನೂ ಹಲವು ವಿಶೇಷಗಳನ್ನು ಒಳಗೊಂಡಿದೆ ಎಂದು ಸೇಲ್ಸ್ ಮ್ಯಾನೇಜರ್ ಕೌಶಿಕ್ ಹೇಳಿದ್ರು.

ಈ ಸಂದರ್ಭದಲ್ಲಿ ಡಿರ್ಪಾಂಮೆಂಟ್ ಹೆಡ್ ರೋನಾಲ್ಡ್ ಡಿಸೋಜಾ, ರೋಷನ್, ಸಂದೇಶ, ಮಿಲನ್ , ನಯನ ಸೇರಿದಂತೆ ಮತ್ತಿತರು ಉಪಸ್ಥತಿರಿದ್ರು. ಒಟ್ಟಾರೆ ರಾಯಲ್ ಎನ್‌ಫಿಲ್ಡ್ ಹೊಸ ಹೊಸ ಬೈಕ್ ಗಳನ್ನು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಹೊಸ ಬೈಕ್ ಯುವ ಸಮುದಾಯಕ್ಕೆ ಕ್ರೇಝ್ ಮೂಡಿಸುವುದು ಗ್ಯಾರಂಟಿ..

Related posts

Leave a Reply