Header Ads
Header Ads
Breaking News

ಮಾರ್ಚ್1ರಿಂದ ಕೆಎ 19 ನೋಂದಾಯಿತ ಖಾಸಗಿ ಕಾರುಗಳು ಶುಲ್ಕ ಪಾವತಿ ಕಡ್ಡಾಯ

ಎನ್‍ಐಟಿಕೆ ಸಮೀಪದ ಟೋಲ್ ಪ್ಲಾಜಾದಲ್ಲಿ ಮಾರ್ಚ್ 1ರಿಂದ ಕೆಎ 19 ನೋಂದಾಯಿತ ಖಾಸಗಿ ಕಾರುಗಳು ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಲಿದೆ.

ದಿನಕ್ಕೆ ಸರಾಸರಿ ಮೂರು ಸಾವಿರದಷ್ಟು ಬಾರಿ ಸ್ಥಳೀಯ ಖಾಸಗಿ ಕಾರುಗಳು ಟೋಲ್ ಕೇಂದ್ರ ದಾಟುತ್ತಿವೆ. ಇದರಿಂದ ಸಂಸ್ಥೆಯು ದಿನಕ್ಕೆ 3 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ. ಅದನ್ನು ಸರಿದೂಗಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಗುತ್ತಿಗೆ ವಹಿಸಿಕೊಂಡಿರುವ ಕೇಶವ ಅಗರ್‍ವಾಲ್ ಸಂಸ್ಥೆ ತಿಳಿಸಿದೆ.

ಸ್ಥಳೀಯ 20 ಕಿ.ಮೀ. ಅಂತರದಲ್ಲಿ ಕೆಎ 19 ನೋಂದಾಯಿತ ಕಾರುಗಳು ತಿಂಗಳ 255 ರೂ. ಪಾಸ್ ಪಡೆದು ಎಷ್ಟು ಬಾರಿ ಬೇಕಾದರೂ ಓಡಾಟ ನಡೆಸ ಬಹುದು. ಪಾಸ್ ಇಲ್ಲದಿದ್ದಲ್ಲಿ ಒಂದು ಬಾರಿಗೆ 50 ರೂ. ಪಾವತಿಸಬೇಕಾಗುತ್ತದೆ. ಕೇಂದ್ರದ ಹೆದ್ದಾರಿ ಇಲಾಖೆ ನೋಟಿಫಿಕೇಷನ್‍ನಲ್ಲಿ ಕಾರು, ಜೀಪು, ಸಣ್ಣ ವಾಹನಗಳಿಗೆ ಒಂದು ಬಾರಿ ಓಡಾಟಕ್ಕೆ 50 ರೂ. ಹಿಂದಿರುಗಿ ಬರುವ ಟಿಕೇಟು ಸಹಿತ 75 ರೂ. ನಿಗದಿ ಪಡಿಸಲಾಗಿದೆ.

ಈ ಹಿಂದೆ ಸ್ಥಳೀಯರ ಹೋರಾಟದ ಫಲವಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಸೂಚಿಸಿತ್ತು. ಇದೀಗ ನಷ್ಟದ ಹಿನ್ನೆಲೆಯಲ್ಲಿ ವಿನಾಯಿತಿ ರದ್ದುಗೊಳಿಸಲು ಕಂಪೆನಿ ತೀರ್ಮಾನಿಸಿದೆ.

Related posts

Leave a Reply

Your email address will not be published. Required fields are marked *