Header Ads
Breaking News

ಎನ್‍ಸಿಐಎಸ್‍ಎಂಗೆ ಸೇರಿಸುವಂತೆ ಆಗ್ರಹ : ಮೂಡುಬಿದರೆಯ ಆಳ್ವಾಸ್‍ನಲ್ಲಿ ಉಪವಾಸ ಸತ್ಯಾಗ್ರಹ

ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಮೂಡುಬಿದಿರೆ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ಕಾಲೇಜಿನ ಆವರಣದಲ್ಲಿ ಸಾಂಕೇತಿಕವಾಗಿ ಮೌನ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸಿದರು. 

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ ಸತ್ಯಾಗ್ರಹದಲ್ಲಿ ಭಾಗವಹಿಸಿ, ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಯೋಗದಲ್ಲಿ ಭಾರತ ದೇಶವು ವಿಶ್ವಗುರುವಾಗುವಂತೆ ಕೇಂದ್ರ ಸರಕಾರವು ಸಹಕಾರ ನೀಡುತ್ತಿದೆ. ಆದರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿದ್ಯಾ ಸಂಸ್ಥೆಗಳನ್ನು ಸಿಸಿಐಎಂಗೆ ಸೇರಿಸುವಂತೆ ನೀತಿ ಆಯೋಗದ ಪ್ರಸ್ತಾಪವಿದ್ದರೂ ಸೇರ್ಪಡೆಗೊಳ್ಳದೇ, ಇನ್ನೊಂದೆಡೆ ಆಯುಷ್ ಸಚಿವಾಲಯದ ಪ್ರಸ್ತಾವನೆಯಂತೆ ಪ್ರತ್ಯೇಕ ಆಯೋಗ ರಚಿಸಬೇಕು ಎಂಬ ನಿಲುವಿಗೂ ಬಾರದೆ ಶೈಕ್ಷಣಿಕವಾಗಿ ಕಾಲೇಜುಗಳನ್ನು ಎನ್‍ಸಿಐಎಸ್‍ಎಂನಿಂದ ಕೈ ಬಿಟ್ಟಿರುವುದು ಆತಂಕ ಮೂಡಿಸಿದೆ. ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ವೃಂದಾ ಬೇಡೆಕರ್, ಉಪನ್ಯಾಸಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *