Header Ads
Breaking News

ಎನ್ ಆರ್ ಸಿ, ಎನ್ ಪಿಆರ್, ಸಿಎಎಗೆ ವಿರೋಧ; ಸುರತ್ಕಲ್‍ನಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಪ್ರತಿಭಟನೆ

ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್ ಆರ್ ಸಿ, ಎನ್ ಪಿಆರ್, ಸಿಎಎ ಎಂಬ ಜನವಿರೋಧಿ ಪ್ರಜಾಪ್ರಭುತ್ವ ವಿರೋಧಿ ಸಂವಿಧಾನದ ವಿರೋಧಿ ಕಾಯಿದೆಯ ವಿರುದ್ಧ ಸುರತ್ಕಲ್‍ನ ಮೊಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಸುರತ್ಕಲ್‍ನಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸುರತ್ಕಲ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಹಾಫಿಝ್ ಮುಹಿಯುದ್ದೀನ್ ರಝ್ವಿ ಅಂಜದಿ ಅವರು, ಈ ದೇಶದಲ್ಲಿರುವಂತಹ ಮುಸಲ್ಮಾನರನ್ನು ಓಡಿಸುವ ಕಾರ್ಯವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಈ ದೇಶದಲ್ಲಿ ಎನ್‍ಆರ್‍ಸಿ, ಎನ್‍ಪಿಆರ್, ಸಿಎಎ ಎಂಬ ಜನವಿರೋಧಿ ನೀತಿಯನ್ನು ಜಾರಿಗೆ ತರುತ್ತಿರುವುದು ಖಂಡನೀಯ ಎಂದರು.ಆನಂತರ ಸುರತ್ಕಲ್ ಈದ್ಗಾ ಮಸೀದಿಯ ಖತೀಬರಾದ ಮೊಹಮ್ಮದ್ ಖಾಮಿಲ್ ಸಖಾಫಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಜನವಿರೋಧಿ ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಈ ನೀತಿಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಜೀಜ್, ಸೆಕ್ರಟರಿ ಮೊಹಮ್ಮದ್ ತೌಫಿಕ್, ಗೌರವಾಧ್ಯಕ್ಷರಾದ ಯಾಕೂಬ್, ಅಬ್ದುಲ್ ಹಮೀದ್, ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *