Header Ads
Breaking News

ಎನ್.ಎಂ.ಪಿ.ಟಿ ಖಾಸಗೀಕರಣಕ್ಕೆ ವಿರೋಧ : ಕೇಂದ್ರ ಸರ್ಕಾರ ನಿರ್ಧಾರಕ್ಕೆ ಮಾಜಿ ಸಚಿವ ಖಾದರ್ ಅಸಮಾಧಾನ

ಸರಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್, ಏರ್ಪೋರ್ಟ್  ಬಳಿಕ ಇದೀಗ ಎನ್‍ಎಂಪಿಟಿಯಲ್ಲೂ ಖಾಸಗೀಕರಣಕ್ಕೆ ಕೇಂದ್ರ ಸರಕಾರ ಮುಂದಾಗಿರುವುದನ್ನು ತೀವ್ರ ವಾಗಿ ವಿರೋಧಿ ಸುವುದಾಗಿ ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಎನ್ ಎಂಪಿಟಿಯಲ್ಲಿ ಒಂದು ವಿಭಾಗದ ಕಂಟೇನರ್ ಗಳ ನಿರ್ವಹಣೆಯನ್ನು ಚೆಟ್ಟಿನಾಡ್ ಸಂಸ್ಥೆ ಗೆ ಈಗಾಗಲೇ ವಹಿಸಲಾಗಿದೆ. ಇನ್ನೊಂದು ಭಾಗವನ್ನು 2 ತಿಂಗಳಲ್ಲಿ ಜೆಎಸ್ಡಬ್ಲ್ಯು ಸಂಸ್ಥೆ ಗೆ ನೀಡಲು ತೀರ್ಮಾನಿಸಲಾಗಿದೆ. ಎನ್‍ಎಂಪಿಟಿಯಲ್ಲಿ ಸುಮಾರು 40ರಷ್ಟು ಶಿಪ್ಪಿಂಗ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗೀಕರಣದಿಂದ ಈ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ನಾಲ್ಕು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು. ಇನ್ನು ರಾಜ್ಯ ಸರಕಾರ ಕಾಟಾಚಾರಕ್ಕೆ ನಾಳೆಯಿಂದ ವಿಧಾನಸಭಾ ಅಧಿವೇಶನ ಕರೆದಿದ್ದು, ಇದು ಕೇವಲ ಹಣಕಾಸಿನ ಅನುಮೋದನೆ ಪಡೆಯುವುದಕ್ಕಾಗಿ ಮಾತ್ರ ಎಂದು ಶಾಸಕ ಖಾದರ್ ಟೀಕಿಸಿದರು. 10 ದಿನಗಳ ಅಧಿವೇಶನ ಇದೀಗ 3 ದಿನಗಳಿಗೆ ಸೀಮಿತಗೊಂಡಿದ್ದು ಪ್ರಶ್ನೋತ್ತರ, ವಿವಿಧ ಇಲಾಖೆಗಳ ವಿಷಯ ಚರ್ಚಿಸಲು ಕಾಲಾವಕಾಶ ಇಲ್ಲ ಎಂದು ದೂರಿದರು.

ಇನ್ನು ಕೇಂದ್ರದ ರಾಷ್ಟ್ರಿಯ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕಾನೂನು ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕಾನೂನು ಅರಿತುಕೊಂಡು ಜಾಗೃತರಾಗಿದ್ದರೆ ಸಾಕು ಅಂತಾ ಹೇಳಿದ್ರು 1955ರಲ್ಲಿ ನಾಗರಿಕ ಹಕ್ಕು ಕಾಯ್ದೆ ಜಾರಿಯಾಗಿದೆ. 2003ರಲ್ಲಿ ನಿಯಮ ರಚನೆಯಾಗಿದೆ.ಅದನ್ನೀಗ ಅಪ್ಡೇಟ್ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಲೋಪದೋಷ ಇದ್ದಲ್ಲಿ ಸರಿಪಡಿಸಿಕೊಂಡು ಬಡವರಿಗೆ, ನಿರ್ಗತಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಸಚಿವರು ಗೊಂದಲ ಸ್ರಷ್ಟಿಸುತ್ತಿದ್ದಾರೆ. ಎಲ್ಲವನ್ನೂ ರಾಜಕೀಯವಾಗಿ ನೋಡಬಾರದು ಎಂದಿಉ ಕೇಂದ್ರ ಸಚಿವ ಅಮಿತ್ ಶಾರವರು ಎನ್.ಆರ್.ಸಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಖಾದರ್ ಸುದ್ದಿ ಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

Related posts

Leave a Reply

Your email address will not be published. Required fields are marked *