Header Ads
Header Ads
Header Ads
Breaking News

ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ- ಪ್ರೊ.ಎಸ್.ಸತೀಶ್ಚಂದ್ರ

ಚಾರ್ಮಾಡಿ: ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದರೂ. ಅನೇಕರು ಯಾವುದೋ ಕೊರತೆಯಿಂದ ನರಳುತ್ತಿದ್ದಾರೆ. ಹೊಂದಾಣಿಕೆಯಿಲ್ಲದಿರುವಿಕೆಯಿಂದಾಗಿ ಅದೆಷ್ಟೋ ಸಂಬಂಧಗಳ ಮೌಲ್ಯ ಕುಸಿಯುತ್ತಿದೆ. ಆದ್ದರಿಂದ ತರಗತಿಯಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಕಲಿಯುವ ಶಿಕ್ಷಣದ ಬದಲಾಗಿ ಜೀವನಶಿಕ್ಷಣವನ್ನು ಕರಗತ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಅಂತಹ ಜೀವನಶಿಕ್ಷಣವನ್ನು ಎನ್.ಎಸ್.ಎಸ್. ನೀಡುತ್ತದೆ ಎಂದು ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.‌ಎಸ್.‌ಸತೀಶ್ಚಂದ್ರ ಹೇಳಿದರು.
ಇವರು ಚಾರ್ಮಾಡಿಯ  ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶ್ರೀ ಧ.ಮಂ.ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪುಸ್ತಕ ಹಾಗೂ ಪೆನ್ನು ಹಿಡಿಯುವ ಕೈಗಳು ಕಸಬರಿಕೆ, ಹಾರೆಗುದ್ದಲಿಗಳನ್ನು ಹಿಡಿದುಕೊಳ್ಳಲು ಕಲಿಯುತ್ತದೆ. ಪ್ರಯೋಗಾಲಯದಿಂದ ಗದ್ದೆಯ ಕಡೆಗೆ ಸಾಗಲು, ಪ್ರಾಯೋಗಿಕವಾದ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಮತ್ತು  ಜೀವನಾನುಭವನ್ನು ಪಡೆಯಲು ಎನ್.ಎಸ್.ಎಸ್. ಹಾಗೂ ಅದರ ಶಿಬಿರ ಅವಕಾಶ ಕಲ್ಪಿಸುತ್ತದೆ. ಈ ಶಿಬಿರದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಪಡೆಯಲು‌ ಸಾಧ್ಯ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಜಿರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಸಮಾಜದ ಚಿತ್ರಣವನ್ನೇ ಬದಲಾಯಿಸುವಂತಹ ಶಕ್ತಿ ಇದೆ. ಚಾರ್ಮಾಡಿಯಲ್ಲಿ ನಡೆದ ಈ ಶಿಬಿರದಲ್ಲಿ ಸ್ವಯಂಸೇವಕರು ಯಾವುದೇ ಭೇದವಿಲ್ಲದೇ ಒಂದಾಗಿ, ಭಾರತಾಂಬೆಯ ಮಕ್ಕಳಾಗಿ‌ ಮಾಡಿದ ಶ್ರಮದಾನ ಹಾಗೂ ಇತರೆ ಕೆಲಸಗಳೇ ಅದನ್ನು ಸಾರಿ ಹೇಳುತ್ತಿವೆ ಎಂದು ಸ್ವಯಂಸೇವಕರನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಿಬಿರವಾಣಿ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸ್ವಯಂಸೇವಕರಿಗೆ ಪ್ರಮಾಣಪತ್ರವನ್ನೂ ನೀಡಲಾಯಿತು.
ಸ್ವಯಂಸೇವಕಿಯರಾದ ರಚನಾ ಹಾಗೂ ಇಂಚರಾ ಶಿಬಿರದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ವೇದಿಕೆಯಲ್ಲಿ ಚಾರ್ಮಾಡಿ ಕ್ಷೇತ್ರದ ತಾಲ್ಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಉದ್ಯಮಿಗಳಾದ ಲಕ್ಷ್ಮಣ ಸಫಲ್ಯ, ಬಾಲಕೃಷ್ಣ ಶೆಟ್ಟಿ, ಪ್ರಗತಿಪರ ಕೃಷಿಕ ಅನಂತ್ ರಾವ್ ಭಟ್, ವಾಸುದೇವ ಗೌಡ, ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ ಹಾಗೂ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಯಂಸೇವಕಿ ಪ್ರಿಯಾಂಕಾ ನಿರೂಪಿಸಿದರು. ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ್ ಸ್ವಾಗತಿಸಿ, ಪ್ರೊ. ಆಶಾಕಿರಣ್ ವಂದಿಸಿದರು.
ಶಿಬಿರದ ಪ್ರಮುಖ ಅಂಶಗಳು ಮತ್ತು ಕಾರ್ಯಗಳು : 
ನೆರೆ ಪೀಡಿತ ಪ್ರದೇಶವಾದ ಚಾರ್ಮಾಡಿಯಲ್ಲಿ 120ಕ್ಕೂ ಹೆಚ್ಚು ಸ್ವಯಂಸೇವಕರಿಂದ ಶ್ರಮದಾನ
ಸ್ವಚ್ಚತಾ ಕಾರ್ಯಕ್ರಮಗಳು
ಮಳೆನೀರುಕೊಯ್ಲು ಮತ್ತು ಇತರ ಜಲಸಂರಕ್ಷಣಾ ವಿಧಾನಗಳ ಬಗ್ಗೆ ಜಾಗೃತಿ ಹಾಗೂ ಅಳವಡಿಕೆ
ಆರೋಗ್ಯ ಶಿಬಿರದಲ್ಲಿ 200 ಕ್ಕೂ ಹೆಚ್ಚು ಗ್ರಾಮಸ್ಥರು ಭಾಗಿ
ಇತರೆ ಜನಪರ ಮತ್ತು ಪರಿಸರಸ್ನೇಹಿ ಯೋಜನೆಗಳು

Related posts

Leave a Reply

Your email address will not be published. Required fields are marked *