Header Ads
Breaking News

ಎಪಿಎಂಸಿ ಗೋದಾಮು ವೀಕ್ಷಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ

ಬೈಕಂಪಾಡಿಯಲ್ಲಿ ತರಕಾರಿ ರಖಂ ವ್ಯಾಪರಸ್ಥರಿಗೆ ಮೀಸಲಿರಿಸಲಾದ ಗೋದಾಮು ಪ್ರದೇಶವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ವೀಕ್ಷಿಸಿದರು.

ಗೋದಾಮು ಸುತ್ತ ಸ್ವಚ್ಚಗೊಳಿಸಿ,ವಿದ್ಯುತ್,ನೀರು ಒದಗಿಸಲಾಗಿದೆ. ಗೋದಾಮಿನಲ್ಲಿ ತರಕಾರಿ ಸಂಗ್ರಹಿಸಲು ಅನುವು ಮಾಡಿಕೊಡಲಾಗಿದೆ.ಕಳೆದ ಎಪ್ರಿಲ್ ನಲ್ಲಿಯೇ ಗೋದಾಮು ಬಗ್ಗೆ ಚರ್ಚಿಸಿ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ ನೀಡಲಾಗಿದೆ. ಇದೀಗ ಇಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ, ರಸ್ತೆ ಕಾಂಕ್ರಟೀಕರಣ,ಹೈ ಮಾಸ್ಟ್ ದೀಪದ ವ್ಯವಸ್ಥೆ,ಟ್ರಕ್ ಚಾಲಕರಿಗೆ ಶೌಚಾಲಯ ,ಕುಡಿಯುವ ನೀರು ಸಹಿತ ಸರ್ವ ಸೌಲಭ್ಯಕ್ಕೆ ಸರಕಾರ ಮೌಖಿಕ ಒಪ್ಪಿಗೆ ನೀಡಿದೆ.

ಮಾಧ್ಯಮದೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ ಈಗಾಗಲೇ ಇಲ್ಲಿ ಗೋದಾಮು ಒದಗಿಸಿದ್ದೇವೆ.ಎಲ್ಲರಿಗೂ ಅವಕಾಶ ಕೊಟ್ಟಿದ್ದೇವೆ.ಆದರೆ ವಿಪಕ್ಷ ಇಲ್ಲಿ ನೀಡಲಾದ ಸೌಲಭ್ಯ ತಿಳಿಯದೆ ಹೇಳಿಕೆ ನೀಡುತ್ತಿದೆ .ಎಪಿಎಂಸಿ ಅಭಿವೃದ್ಧಿಗೆ ಜತೆಯಾಗಿ ನಾವೆಲ್ಲಾ ಹೋಗಬೇಕಿದೆ.ಮುಂದಿನ ದಿನದಲ್ಲಿ ಮಾದರಿ ಎಪಿಎಂಸಿಯಾಗಿ ಮಾಡಿ ತೋರಿಸುತ್ತೇನೆ ಎಂದಿದ್ದಾರೆ. ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ಮೇ 24 ರವರೆಗೆ ತರಕಾರಿ ರಖಂವ್ಯಾಪಾರಿಗಳಿಗೆ ಗಡುವು ಕೊಡುತ್ತೇವೆ.ಬಾರದಿದ್ದರೆ ಯಾರು ಆಸಕ್ತರಿದ್ದಾರೆ ಅವರಿಗೆ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ಅವರು ರಖಂ ವ್ಯಾಪಾರಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದಿದ್ದಾರೆ.

Related posts

Leave a Reply

Your email address will not be published. Required fields are marked *