Header Ads
Breaking News

ಎಪ್ರಿಲ್ 26ರಂದು ಈರಿ ಆದಿ ಶ್ರೀ ಕೋರ್ಡ್ಡಬ್ಬು ದೈವಸ್ಥಾನದ ಬ್ರಹ್ಮಕಲಶೋತ್ಸವ

ಮಂಗಳೂರಿನ ಅಶೋಕನಗರದ ಈರಿ ಆದಿ ಕೋಡ್ರ್ದಬ್ಬು ದೈವಸ್ಥಾನದ ಬ್ರಹ್ಮಕಲಶೋತ್ಸವವು ಎಪ್ರಿಲ್ 26ರಂದು ಹಾಗೂ ಮೇ 4ರಿಂದ 7ರ ವರೆಗೆ ವರ್ಷಾವಧಿ ನೇಮೋತ್ಸವವು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ರಾಧಾಕೃಷ್ಣ ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈರಿ ಆದಿ ಶ್ರೀ ಕೋಡ್ರ್ದಬ್ಬು ದೈವಸ್ಥಾನವು ಬೋಳೂರು ಗ್ರಾಮದ ಪಾಲ್ಗುಣಿ ನದು ತೀರದ ಈರಿ ಎಂಬಲ್ಲಿ ಅನಾಧಿಕಾಲದಿಂದ ಮುಂಡಾಲ ಸಮಾಜ ಬಾಂಧವರು ಹಾಗೂ ಊರಿನ ಭಕ್ತ ಜನರು ಆರಾಧಿಸಿಕೊಂಡು ಬಂದಿರುವ ಈರಿ ಆದಿ ಶ್ರೀ ಕೋಡ್ರ್ದಬ್ಬು ದೈವಸ್ಥಾನವು ಊರಿನ ಹಾಗೂ ಪರವೂರಿನ ಭಕ್ತಾಧಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡು ದೈವಸ್ಥಾನವು ಎಪ್ರಿಲ್ 26ರಂದು ಬ್ರಹ್ಮಕಲಶೋತ್ಸವವು ಧಾರ್ಮಿಕ ವಿಧಾನಗಳೊಂದಿಗೆ ಜರುಗಲಿದೆ. ಮೇ 4ರಿಂದ ವರ್ಷಾವಧಿ ನೇಮೋತ್ಸವ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷರುಗಳಾದ ವಾಮನ ಶೆಟ್ಟಿ, ಪ್ರಭಾಕರ್ ರಾವ್, ಶಶಿಧರ್, ನರೇಂದ್ರ ಕಿರೋಡಿಯನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *