Header Ads
Breaking News

ಎಪ್ರಿಲ್ 4ರಂದು ಮಂಗಳೂರಿನ ಪುರಭವನದಲ್ಲಿ ಗರ್ವ ಟೆಲಿ ಚಿತ್ರ ಬಿಡುಗಡೆ

ಹರ್ಷಿತ್ ಸೋಮೇಶ್ವರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಗರ್ವ ಟೆಲಿಚಿತ್ರವು ಮಂಗಳೂರಿನ ಪುರಭವನದಲ್ಲಿ ಎಪ್ರಿಲ್ 4ರಂದು ಬಿಡುಗಡೆಗೊಳ್ಳಲಿದೆ ಎಂದು ಕಲಾವಿದ ಆಶಿಕ್ ಗೋಪಾಲಕೃಷ್ಣ ಹೇಳಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎರಡು ವರ್ಷಗಳ ಹಿಂದೆ ಒಂದು ಟೆಲಿ ಚಿತ್ರ ತೆರೆಗೆ ಬರುತ್ತದೆ.ಆ ಚಿತ್ರವು ತುಳುನಾಡಿನ ಕಂಬಳದ ಪರವಾದ ಹೋರಾಟ ಕಂಬಳದ ಜತೆ ತುಳುನಾಡಿನ ಜನತೆಯ ಒಡನಾಟ ಹೀಗೆ ನಮ್ಮ ಜನಪದ ಇತಿಹಾಸವನ್ನು ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇವು. ಇದೀಗ ತುಳುನಾಡ ಕಂಬಳ ಚಿತ್ರದ ಅದೇ ತಂಡ ಮತ್ತೊಮ್ಮೆ ಜನರ ಮುಂದೆ ಬರಲು ಸಿದ್ಧವಾಗಿದೆ. ಗರ್ವ ಎಂಬ ಟೆಲಿಚಿತ್ರ ಹರ್ಷಿತ್ ಸೋಮೇಶ್ವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಭೂಗತ ಜಗತ್ತು, ಲ್ಯಾಂಡ್ ಮಾಫಿಯಾ, ಹೀಗೆ ಆಕ್ಷನ್ ಸಿನಿಮಾ ರೀತಿಯಾಗಿ ಸಾಗಿ, ಸಂಬಂಧಗಳನ್ನು ಬೆಸೆಯುವ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಈ ಟೆಲಿ ಚಿತ್ರದಲ್ಲಿದೆ. ಸಂಜು ಗುರುಪುರ ಮತ್ತು ದೀಪಕ್ ದಾಸ್ ಸಹ ನಿರ್ಮಾಣದ ಹೊಣೆ ಹೊತ್ತು, ನಟನೆಯನ್ನು ಮಾಡಿದ್ದಾರೆ, ನೂರಕ್ಕೂ ಹೆಚ್ಚು ಕಲಾವಿದರು ಈ ಟೆಲಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಟೆಲಿ ಚಿತ್ರದ ನಿರ್ದೇಶಕ ಹರ್ಷಿತ್ ಸೊಮೇಶ್ವರ, ಅಭಿಲಾಷ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *