Header Ads
Header Ads
Breaking News

ಎಮ್‌ಆರ್‌ಪಿ‌ಎಲ್ ಪರಿಸರ ವಿರೋಧಿ ನೀತಿಗೆ ಖಂಡನೆ, ನಾಗರಿಕ ಹೋರಾಟ ಸಮಿತಿಯಿಂದ ಆಕ್ರೋಶ

ಎಂಆರ್‌ಪಿ‌ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾರಣಾಂತಿಕ ಮಾಲಿನ್ಯದ ವಿರುದ್ದ ಜೋಕಟ್ಟೆ ಗ್ರಾಮಸ್ಥರು ನಡೆಸಿದ ಹೋರಾಟದ ಭಾಗವಾಗಿ ರಾಜ್ಯ ಸರಕಾರ ಹಲವು ಪರಿಹಾರ ಕ್ರಮಗಳನ್ನು ಕಾಲಮಿತಿಯೊಳಗಡೆ ಕೈಗೊಳ್ಳುವಂತೆ ಸೂಚಿಸಿ ಆದೇಶ ಹೊರಡಿಸಿತ್ತು. ಸರಕಾರಿ ಆದೇಶವನ್ನು ಜಾರಿಗೊಳಿಸುವಲ್ಲಿ ಕಂಪೆನಿ ನಿರಾಸಕ್ತಿ ತೋರಿಸುತ್ತಿದ್ದು. ಕಂಪೆನಿಯ ನಿಯಮ ವಿರೋಧಿ ಧೋರಣೆಯ ವಿರುದ್ದ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಬೆಳಿಗ್ಗೆ ಎಂಆರ್‌ಪಿ‌ಎಲ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನೆ ನಡೆಸಿದರು.
ಎಂಆರ್‌ಪಿ‌ಎಲ್ ಮುಖ್ಯ ದ್ವಾರದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈ‌ಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಕಂಪೆನಿ ಜೋಕಟ್ಟೆ ಭಾಗದಲ್ಲಿ ನಿಯಮ ಬಾಹಿರವಾಗಿ ಕಾರ್ಯಾಚರಿಸಿ, ಅಪಾರ ಪ್ರಮಾಣದ ಮಾಲಿನ್ಯ ಉಂಟು ಮಾಡಿದೆ. ಇದರಿಂದ ಕಂಗೆಟ್ಟ ಸ್ಥಳೀಯರು ನಾಗರಿಕ ಹೋರಾಟ ಸಮಿತಿ ರಚಿಸಿ ಎರಡು ವರ್ಷಗಳ ಕಾಲ ಧೀರ್ಘ ಹೋರಾಟ ನಡೆಸಿದ್ದರು. ಹೋರಾಟದ ಫಲವಾಗಿ ಕಂಪೆನಿ ಮತ್ತು ಜನವಸತಿಯ ಮಧ್ಯೆ ಇಪ್ಪತ್ತೇಳು ಎಕರೆ ಭೂಸ್ವಾಧೀನ ಮಾಡಿ ಹಸಿರು ವಲಯ ನಿರ್ಮಿಸಬೇಕು, ಕೋಕ್ ಡಂಪಿಂಗ್ ಯಾರ್ಡ್ ಸ್ಥಳಾಂತರಿಸುವುದು ಸೇರಿದಂತೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿವಾರಣೆಗೆ ಕಾಲಮಿತಿಯೊಳಗಡೆ ಪರಿಹಾರ ಕೈಗೊಳ್ಳಬೇಕು ಎಂದು ಸರಕಾರ ಅಧಿಕೃತ ಆದೇಶ ಹೊರಡಿಸಿತ್ತು. ಸರಕಾರಿ ಆದೇಶವನ್ನು ಪಾಲಿಸುವುದಾಗಿ ಮಾತು ಕೊಟ್ಟಿದ್ದ ಕಂಪೆನಿ, ಸರಕಾರದ ಕಾಲಮಿತಿ ಮುಗಿಯುತ್ತಾ ಬಂದರೂ ಆದೇಶ ಜಾರಿಗೊಳಿಸಲು ಹಿಂಜರಿಯುತ್ತಿದೆ. ಸರಕಾರಿ ಆದೇಶವನ್ನು ಧಿಕ್ಕರಿಸುತ್ತಿದೆ. ಇದರಿಂದ ಸ್ಥಳೀಯರು ಅಪಾರ ಕಷ್ಟನಷ್ಟಗಳಿಗೆ ಒಳಗಾಗುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಡಿವೈ‌ಎಫ್‌ಐ ಮುಖಂಡರು, ಸ್ಥಳೀಯರು ಹಾಜರಿದ್ದರು.

Related posts

Leave a Reply