Header Ads
Breaking News

ಎರಡನೇ ದಿನದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ : ನಿನ್ನೆಗಿಂತ ಇಂದು ಹೆಚ್ಚಾದ ಪ್ರಯಾಣಿಕರ ಸಂಖ್ಯೆ

ಕೆಎಸ್ಸಾರ್ಟಿಸಿ ಬಸ್ಸಿಗೆ ಮಂಗಳೂರಿನಲ್ಲಿ ಭಾರೀ ಬೇಡಿಕೆ ಬಂದಿದೆ. ಬೆಂಗಳೂರು, ಹುಬ್ಬಳ್ಳಿ, ಹಾಸನ, ಮಡಿಕೇರಿ ಹೀಗೆ ಹೊರ ಜಿಲ್ಲೆಗಳಿಗೆ ಬಸ್ ತೆರಳುತ್ತಿದ್ದು ಜನರು ಸರದಿ ಸಾಲಿನಲ್ಲಿ ನಿಂತು ಬಸ್ ಏರುತ್ತಿದ್ದಾರೆ. ಒಂದು ಬಸ್ಸಿನಲ್ಲಿ 30 ಪ್ರಯಾಣಿಕರಿಗ ಅವಕಾಶ ನೀಡಲಾಗುತ್ತಿದೆ. ಹಾಗೆಯೇ ಜಿಲ್ಲೆಯ ಒಳಗೆ ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ, ಸುಳ್ಯ ಭಾಗಗಳಿಗೂ ಬಸ್ ಗಳು ಸಂಚರಿಸುತ್ತಿದ್ದು ಜನರು ಮಾಸ್ಕ್ ಹಾಕ್ಕೊಂಡು ಪ್ರಯಾಣಿಸುತ್ತಿದ್ದಾರೆ. ಆದರೆ ನಗರ ಸಂಚಾರದ ನರ್ಮ್ ಬಸ್ ಗಳನ್ನು ಇನ್ನೂ ಓಡಾಟಕ್ಕೆ ಬಿಟ್ಟಿಲ್ಲ. ಇಂದು 60ಕ್ಕೂ ಹೆಚ್ಚು ಬಸ್ ಗಳನ್ನು ಬಿಡಲಾಗಿದ್ದು ಜನರ ಬೇಡಿಕೆ ನೋಡಿಕೊಂಡು ಬಸ್ ಸಂಚಾರ ಹೆಚ್ಚಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ಕರಾವಳಿಯಲ್ಲಿ ಖಾಸಗಿ ಬಸ್ ಗಳನ್ನು ನಂಬಿಕೊಂಡಿದ್ದ ಜನ ಈಗ ಕೆಎಸ್ಸಾರ್ಟಿಸಿಯತ್ತ ಮುಖ ಮಾಡುತ್ತಿದ್ದಾರೆ. ಖಾಸಗಿ ಬಸ್ ಗಳು ಮೇ ತಿಂಗಳ ನಂತರವೇ ಸಂಚಾರಕ್ಕಿಳಿಯಲಿದೆ.

Related posts

Leave a Reply

Your email address will not be published. Required fields are marked *