Header Ads
Header Ads
Breaking News

ಎರಡು ತಂಡಗಳ ನಡುವೆ ಗುಂಪು ಘರ್ಷಣೆ : ಕಲ್ಲು, ಸೋಡಾ ಬಾಟಲಿಗಳನ್ನು ಎಸೆದು ಗಲಾಟೆ

ಮಂಜೇಶ್ವರ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಶುಕ್ರವಾರ ರಾತ್ರಿ ಎರಡು ತಂಡಗಳ ಮದ್ಯೆ ಗುಂಪು ಘರ್ಷಣೆ ನಡೆದಿದೆ. ಎರಡೂ ಗುಂಪುಗಳು ಮೊದಲು ಕಲ್ಲುಗಳನ್ನು ಎಸೆದು ಹೊಡೆದಾಡಿ ಅಲ್ಪ ಬಳಿಕ ಸೋಡಾ ಬಾಟ್ಲಿಗಳನ್ನು ಎಸೆಯಲು ಆರಂಭಿಸಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಘರ್ಷಣೆ ಆರಂಭವಾಗುತ್ತಲೇ ಅಂಗಡಿ ಮಗ್ಗಟ್ಟುಗಳು ಮುಚ್ಚಲ್ಪಟ್ಟಿವೆ. ಹಲವಾರು ವಾಹನಗಳು ಹಾನಿಗೀಡಾಗಿವೆ. ಕುಂಜತ್ತೂರಿನಲ್ಲಿರುವ ಮುಸ್ತಫ ಎಂಬವರ ಮನೆಗೆ ಕಲ್ಲೆಸೆದು ಕಿಟಕಿ ಗಾಜುಗಳನ್ನು ಪುಡಿಗೈಯಲಾಗಿದೆ.

ಎರಡೂ ವಿಭಾಗದ ವಾಹನಗಳು ಪುಡಿಯಾಗಿವೆ. ಬಳಿಕ ಆಗಮಿಸಿದ ಪೊಲೀಸ್ ಪಡೆ ಘರ್ಷಷಣೆಯನ್ನು ಹತೋಟಿಗೆ ತರಲು ಲಾಠಿ ಚಾರ್ಜ್ ನಡೆಸಿ ಅಶ್ರುವಾಯುವನ್ನು ಬಳಸಿ ಜನರನ್ನು ಚದುರಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಿಲ್ಲಾ ಪೋಲಿಸ್ ಅಧಿಕಾರಿ, ಕುಂಬಳೆ ಸರ್ಕಕಲ್, ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಪರಿಸರ ಪ್ರದೇಶಗಳಲ್ಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಕ್ಷೇತ್ರವೊಂದರಲ್ಲಿ ನಡೆಯುವ ಉತ್ಸವದ ಸಲುವಾಗಿ ಬ್ಯಾನರ್ ಹಾಕುತ್ತಿರುವಾಗ ಮಾತಿಗೆ ಮಾತು ಬೆಳೆದು ಕೊನೆಗೆ ಘರ್ಷಣೆಯಲ್ಲಿ ಪರ್ಯಾವಸಾನಗೊಂಡಿದೆ.

Related posts

Leave a Reply