Header Ads
Header Ads
Breaking News

ಎರಡು ತಿಂಗಳಿಂದ ದಾರಿದೀಪ ಮಾಯ:ವಿದ್ಯುತ್ ಕಂಬಕ್ಕೆ ಗ್ಯಾಸ್‌ಲೈಟ್ ಕಟ್ಟಿ ವಿನೂತನ ಪ್ರತಿಭಟನೆ

ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಗಾರಿಕಾ ರಸ್ತೆ ಸಹಿತ ಹೆದ್ದಾರಿಯುದ್ಧಕ್ಕೂ ದಾರಿದೀಪ ಕಳೆದ ಎರಡು ತಿಂಗಳಿಂದಲೂ ನಿಷ್ಕ್ರೀಯಗೊಂಡಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಈ ಬಗ್ಗೆ ಗ್ರಾ.ಪಂ. ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬುದಾಗಿ ಆರೋಪಿಸಿದ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಗ್ಯಾಸ್‌ಲೈಟ್ ಕಟ್ಟಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಹಿರಿಯರಾದ ಶ್ಯಾಮ ಜಿ. ಅಂಚನ್, ಕಳೆದ ಎರಡು ತಿಂಗಳಿಂದ ಈ ಭಾಗದ ವಿದ್ಯುತ್ ಕಂಬಗಳಲ್ಲಿ ದಾರಿ ಉರಿಯುತ್ತಿಲ್ಲ, ದಾರಿದೀಪವಿಲ್ಲದೆ ಮೀನುಗಾರಿಕಾ ರಸ್ತೆ ಪಾದಾಚಾರಿಗಳಿಗೆ ಬಹಳ ಅಪಾಯಕಾರಿಯಾಗಿ ಗೋಚರಿಸುತ್ತಿದೆ.

ಸಂಜೆ ಕತ್ತಲೆಯಾಗುತ್ತಿದ್ದಂತೆ ಅದೇಷ್ಟೋ ಯುವತಿಯರು ಕೆಲಸಬಿಟ್ಟು ಇದೇ ರಸ್ತೆಯಾಗಿ ಒಂದೆರಡು ಕೀ.ಮೀ. ನಡೆದೇ ಸಾಗುವ ಅನಿರ್ವಾಯತೆ ಇದ್ದು, ದಾರಿ ದೀಪವಿಲ್ಲದೆ ಯಾವಗ ಯಾವ ಅನಾಹುತ ಸಂಭವಿಸುತ್ತೋ ಎಂಬ ಹೆದರಿಕೆಯಿಂದಲೇ ಸಾಗುವಂತ್ತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ಗಮನಕ್ಕೆ ನಿರಂತರವಾಗಿ ತರುತ್ತಿದ್ದರೂ ಯಾವುದೇ ರೀತಿಯಲ್ಲಿ ಗ್ರಾ.ಪಂ. ಸ್ಪಂಧಿಸುತ್ತಿಲ್ಲ ಇದೀಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿದ್ಯುತ್ ಕಂಬವೊಂದಕ್ಕೆ ಗ್ಯಾಸ್‌ಲೈಲ್ ದೀಪವೊಂದನ್ನು ಕಟ್ಟಿ ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ, ಶೀಘ್ರವಾಗಿ ಇದಕ್ಕೆ ಸ್ಪಂಧಿಸದಿದ್ದಲ್ಲಿ ಗ್ರಾ.ಪಂ. ಮುಂಭಾಗ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂಬುದಾಗಿ ಎಚ್ಚರಿಸಿದ್ದಾರೆ.ಅಟೋ ಚಾಲಕ ಸಂದೀಪ್ ಮೆಂಡನ್ ಮಾತನಾಡಿ, ದಾರಿದೀಪ ವಿಲ್ಲದೆ ಈ ಭಾಗದ ನೂರಾರು ನಿವಾಸದ ವಾಸಿಗಳು ನಿರಂತರ ಸಮಸ್ಯೆ ಅನುಭವಿಸುವಂತ್ತಾಗಿದೆ.

ದಾರಿದೀಪವಿದ್ದರೆ ಒಂಟಿಯಾಗಿ ಸಾಗ ಬಹುದಾದ ದಾರಿಯನ್ನು ಮನೆಮಂದಿಯ ಸಹಕಾರ ಪಡೆದು ಮನೆ ತಲುಪಬೇಕಾದ ಸ್ಥಿತಿ ಇಲ್ಲಿದೆ. ದಿನನಿತ್ಯ ಮನೆಮಂದಿ ಮನೆಮಗಳಿಗಾಗಿ ಹೆದ್ದಾರಿ ಪಕ್ಕ ಕಾದು ಮನೆತಲುಪಿಸುವಂತ್ತಾಗಿದೆ, ಈ ಬಗ್ಗೆ ಗ್ರಾಮ ಪಂಚಾಯಿತಿಯ ಈ ಭಾಗದ ಸದಸ್ಯರು ಸಹಿತ ಗ್ರಾ.ಪಂ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಗ್ರಾ.ಪಂ. ದುರ್ವತನೆ ಇದೇ ರೀತಿ ಮುಂದುವರಿಸಿದರೆ ಅದರವಿರುದ್ಧ ಪ್ರತಿಭಟಿಸುವುದು ಅನಿವಾಯವಾದೀತು ಎಂಬುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭ ಸ್ಥಳೀಯ ಗ್ರಾಮಸ್ಥರಾದ ಜಯಣ್ಣ, ನೂತನ್ ಸಾಲ್ಯಾನ್, ಅಶ್ರಫ್, ಪ್ರಸಾದ್ ಬಡಾ, ರಮೇಶ್ ಆಚಾರ್ಯ, ಗಣೇಶ್ ಬಡಾ, ಕರೀಮ್ ಬಡಾ ಎರ್ಮಾಳ್, ದಿವಾಕರ್ ಸುವರ್ಣ ಮುಂತಾದವರಿದ್ದರು.

Related posts

Leave a Reply