Header Ads
Breaking News

ಎರಡು ದಶಕಗಳ ಬಳಿಕ ಒಡಿಶಾದಲ್ಲಿ ಅಪ್ಪಳಿಸಿದ ಫನಿ ಚಂಡಮಾರುತ: ಅಪಾರ ಹಾನಿ

ಎರಡು ದಶಕಗಳ ಬಳಿಕ ಒಡಿಶಾದಲ್ಲಿ ಶುಕ್ರವಾರ ಬೆಳಗ್ಗೆ ಅಪ್ಪಳಿಸಿರುವ ಅತ್ಯಂತ ಪ್ರಭಾವಿ ಚಂಡಮಾರುತ `ಫನಿ’ ಭಾರೀ ಅನಾಹುತವನ್ನು ಸೃಷ್ಟಿಸಿದ್ದು, 180ರಿಂದ 200 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಭೂಕುಸಿತ ಉಂಟಾಗಿದ್ದು, ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವಾರು ಹಳ್ಳಿಗಳು ಮುಳುಗಡೆಯಾಗಿವೆ.

ಆಂಧ್ರಪ್ರದೇಶ ಹಾಗೂ ಪಶ್ಚಿಮಬಂಗಾಳದ ಕರಾವಳಿ ಪ್ರದೇಶಗಳಲ್ಲೂ ಜೋರಾಗಿ ಗಾಳಿ ಬೀಸಲಾರಂಭಿಸಿದೆ. ಸುಮಾರು ರಾತ್ರಿ 11:00 ಗಂಟೆಯ ತನಕ ಚಂಡಮಾರುತದ ಅಬ್ಬರ ಒಡಿಶಾದಲ್ಲಿ ಮುಂದುವರಿಯಲಿದ್ದು, ಶನಿವಾರ ಬೆಳಗ್ಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ವಿಸ್ತರಣೆಯಾಗಲಿದೆ.

ಒಡಿಶಾ ಸರಕಾರ ಕರಾವಳಿ ತೀರದಲ್ಲಿರುವ ಸುಮಾರು 11 ಲಕ್ಷ ಜನರನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರಗೊಳಿಸಿದೆ. ಸೇನೆ, ನೌಕಾಸೇನೆ, ವಾಯುಸೇನೆ, ಕೋಸ್ಟಲ್ ಗಾರ್ಡ್ ಹಾಗೂ ವಿಪತ್ತು ನಿರ್ವಹಣಾ ಪಡೆ ರಕ್ಷಣೆಯಲ್ಲಿ ತೊಡಗಿವೆ.

Related posts

Leave a Reply

Your email address will not be published. Required fields are marked *