Header Ads
Breaking News

ಎರಡು ಬಾರಿ ನದಿಗೆ ಹಾರಲು ಯತ್ನಿಸಿದ ವ್ಯಕ್ತಿ : ನೇತ್ರಾವತಿ ಸೇತುವೆಯ ಬಳಿ ನಡೆದ ಘಟನೆ

ಉಳ್ಳಾಲ: ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಒಂದೇ ದಿನದಲ್ಲಿ ಎರಡು ಬಾರಿ ರಕ್ಷಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನಡೆದಿದೆ.

ಕುತ್ತಾರು ಭಂಡಾರಬೈಲು ನಿವಾಸಿ ಚಂದಪ್ಪ(44) ಆತ್ಮಹತ್ಯೆಗೆ ಯತ್ನಿಸಿದವರು. ಶಾಲಾ ವಾಹನದಲ್ಲಿ ಚಾಲಕನಾಗಿದ್ದ ಅವರು ಸದ್ಯ ಮನೆಯಲ್ಲೇ ಇರುತ್ತಿದ್ದರು. ಕುಡಿತದ ಚಟ ಹೊಂದಿರುವ ಅವರು ಮಂಗಳವಾರ ಬೆಳಿಗ್ಗೆ ನೇತ್ರಾವತಿ ಸೇತುವೆ ಮೇಲೆ ನಿಂತಿದ್ದ ಸಂದರ್ಭ, ಸಂಶಯಗೊಂಡ ಪರಿಚಿತ ಚೆಂಬುಗುಡ್ಡೆ ಗ್ಯಾರೇಜ್ ಮಾಲೀಕ ಬಾಲು ಎಂಬವರು ಮನೆಮಂದಿಗೆ ವಿಚಾರ ತಿಳಿಸಿ ತಮ್ಮ ವಾಹನದಲ್ಲಿ ಚಂದಪ್ಪ ಅವರನ್ನು ಮನೆವರೆಗೆ ಬಿಟ್ಟು ಬಂದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂದಪ್ಪ ಅವರು ಸೇತುವೆಗೆ ವಿಷದ ಬಾಟಲಿ ಹಿಡಿದುಕೊಂಡು ಆಗಮಿಸಿದ್ದರು. ಕುಡಿತದ ಅಮಲಿನಲ್ಲಿ ವಿಷದ ಬಾಟಲಿಯ ಮುಚ್ಚಳ ತೆಗೆಯಲು ಸಾಧ್ಯವಾಗದೆ ಮತ್ತೆ ನೇತ್ರಾವತಿ ಸೇತುವೆಯಿಂದ ಹಾರಲು ಒಂದು ಕಾಲು ಮೇಲಿಟ್ಟಿದ್ದರು. ಇದನ್ನು ಗಮನಿಸಿದ ಅವರ ಊರಿನವರೇ ಆದ ರಿಕ್ಷಾ ಚಾಲಕ ಕುತ್ತಾರಿನವ ಭರತ್ ಹಾಗೂ ರಕ್ಷಿತ್ ಎಂಬವರು ಹಿಡಿದು ರಕ್ಷಿಸಿದ್ದಾರೆ. ಬಳಿಕ ಮತ್ತೆ ತಮ್ಮ ರಿಕ್ಷಾದಲ್ಲಿ ಚಂದಪ್ಪ ಅವರನ್ನು ಮನೆಗೆ ಬಿಟ್ಟಿದ್ದಾರೆ. ಚಂದಪ್ಪ ಅವರ ಪುತ್ರ ವಿದೇಶದಲ್ಲಿದ್ದು, ಪತ್ನಿ ಜತೆಗೆ ಮನೆಯಲ್ಲಿ ವಾಸವಿದ್ದಾರೆ. ಸೇತುವೆಗೆ ತಡೆಬೇಲಿ ಅಗತ್ಯ ನಿರ್ಮಾಣ ಆಗಬೇಕಿದೆ. ಇಲ್ಲವಾದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಲೇ ಇರುತ್ತದೆ ಅನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

 

Related posts

Leave a Reply

Your email address will not be published. Required fields are marked *