Header Ads
Header Ads
Header Ads
Breaking News

ಎರಡು ಬೈಕ್‌ಗಳ ನಡುವೆ ಪರಸ್ಪರ ಡಿಕ್ಕಿ ಬೈಕ್ ಸವಾರ ಸಾವು ಪುತ್ತೂರಿನ ಕೊಡಿನೀರು ಎಂಬಲ್ಲಿ ಘಟನೆ

ಎರಡು ಬೈಕ್‌ಗಳ ನಡುವೆ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪುತ್ತೂರಿನ ಕೊಡಿನೀರು ಎಂಬಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಬರಪ್ಪಾಡಿ ಅನ್ಯಾಡಿ ಸುಲೈಮಾನ್ ರವರ ಪೌತ್ರ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಹಮ್ಮದ್ ಅನಾಜ್ ಎಂದು ಗುರುತಿಸಲಾಗಿದೆ.

ಅನಾಝ್‌ನ ಮನೆಯಲ್ಲಿ ಶುಭ ಕಾರ್ಯಕ್ರಮವಿದ್ದು, ಕ್ಯಾಮರಾ ತರಲೆಂದು ಸವಣೂರಿಗೆ ಬಂದಿದ್ದರು, ಸವಣೂರಿನಲ್ಲಿ ಕ್ಯಾಮರಾ ದೊರೆಯದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಪುತ್ತೂರಿಗೆ ಬಂದು ಕ್ಯಾಮರಾ ಪಡೆದುಕೊಂಡು ಮನೆಗೆ ಹಿಂತಿರುಗುತ್ತಿರುವ ವೇಳೆ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಎದುರಿನಿಂದ ಬಂದ್ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಗಾಯಗೊಂಡವರ ಪೈಕಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಮತ್ತೋರ್ವ ವಿದ್ಯಾರ್ಥಿ ಅಬ್ದುಲ್ ಆಸೀಪ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಬೈಕ್‌ನಲ್ಲಿದ್ದ ಗಾಯಾಳು ವಿಶ್ವನಾಥ್ ಮತ್ತು ಅಶೋಕ್ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

Leave a Reply