Header Ads
Header Ads
Header Ads
Breaking News

ಎರೊಫಿಲಿಯಾ-2018 ಸಹ್ಯಾದ್ರಿಯಲ್ಲಿ ರಾಷ್ಟ್ರಮಟ್ಟದ ಎರೋ ಮಾಡೆಲಿಂಗ್ ಸ್ಪರ್ಧೆ ಜ.26 ಮತ್ತು 27 ರಂದು ಎರೋ ಮಾದರಿಯ ಸ್ಪರ್ಧೆ

 

ಏರೋನ್ಯಾಟಿಕ್ಸ್ ಕ್ಷೇತ್ರದಲ್ಲಿ ವಿಶಾಲ ದೃಷ್ಠಿಕೋನ ಇಟ್ಟುಕೊಂಡಿರುವ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಜನವರಿ 26 ಮತ್ತು 27 ರಂದು ಏರೋಫಿಲಿಯಾ-2018 ರಾಷ್ಟ್ರಮಟ್ಟದ ಏರೊ ಮಾದರಿಯ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಭೂಶಿ ವಿಮಾನಯಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಅನ್ವೇಷಣೆ ಆಲೋಚನೆಗೆ ಏರೋ ಮಾದರಿ ಸ್ಪರ್ಧೆಗೆ ವೇದಿಕೆಯನ್ನು ಕಲ್ಪಿಸಿದೆ.

ಆನವರಿ 26 ರಂದು ವಿಮಾನದ ಮಾದರಿಗಳನ್ನು ಅಬ್ದುಲ್ಲಾ ಗಸೀಮ್ ಮತ್ತು ಎಸ್ಸಾ ಸಯೀದ್ ಅವರು ಪ್ರದರ್ಶಿಸುವರು. ಅಲ್ಲದೇ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಣಿತ, ಇತಿಹಾಸ, ಕಲೆ, ಗ್ರಾಫಿಕ್ಸ್ ಹಾಗೂ ವಿಜ್ಞಾನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು. ಈ ಸ್ಪರ್ಧೆಯ ಮತ್ತೊಂದು ಆಶ್ಚರ್ಯದ ವಿಷಯವೆಂದರೆ ಭಾರತದ ಪ್ರಸಿದ್ಧ ಡ್ರೋಣ್ ಸ್ಪರ್ಧೆಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಗೌಶ್‌ಖಾನ್, ರನುತಂತಿ, ವಸಂತ ಕೇದಿಗೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply