Header Ads
Header Ads
Breaking News

ಕುಂದಾಪುರದಲ್ಲಿ ಎರ್ನಾಕುಲಂ-ಪುಣೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪ್ರಥಮ ನಿಲುಗಡೆಗೆ : ಅದ್ಧೂರಿ ಸ್ವಾಗತ

ಕುಂದಾಪುರ: ಹಲವು ವರ್ಷಗಳ ಹೋರಾಟದ ಬಳಿಕ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರ ಕಾಳಜಿಯಲ್ಲಿ ಎರ್ನಾಕುಲಂ-ಪುಣೆ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದು, ಮಂಗಳವಾರ ಪ್ರಥಮ ನಿಲುಗಡೆ ಹಿನ್ನೆಲೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಜೈ ಭಾರ್ಗವ ಬಳಗದ ವತಿಯಿಂದ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಪನ್ವೇಲ್ ಮೂಲಕ ಹೋಗುವ ಈ ರೈಲು ಪುಣೆ, ಗೋವಾ, ಪನ್ವೇಲ್ ಹೋಗುವವರಿಗೆ ಅನುಕೂಲವಾಗಲಿದ್ದು ಮಾತ್ರವಲ್ಲದೇ ಕೇರಳದಿಂದ ಕೊಲ್ಲೂರಿಗೆ ಆಗಮಿಸುವ ಭಕ್ತರಿಗೂ ಅನುಕೂಲವಾಗುತ್ತೆ. ಈ ಸಮಿತಿ ಹುಟ್ಟಿಕೊಂಡ 9 ವರ್ಷದಲ್ಲಿ ಕುಂದಾಪುರದಲ್ಲಿ ಒಟ್ಟು 17 ರೈಲುಗಳಿಗೆ ನಿಲುಗಡೆ ಸಿಕ್ಕಿದೆ, ಈ ಹೋರಾಟಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಹಲವರು ಸಹಕಾರ ನೀಡಿದ್ದಾರೆ. ಸದ್ಯ ಅಜಿತ್ ಕಿರಾಡಿ, ಗೌತಮ್ ಶೆಟ್ಟಿಯವರು ನಮ್ಮ ಜೊತೆ ಕೈಜೋಡಿಸಿದ್ದು ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು. ಈ ಸಂದರ್ಭ ಜೈ ಭಾರ್ಗವ ಬಳಗದ ಅಜಿತ್ ಶೆಟ್ಟಿ ಕಿರಾಡಿ, ತಾ.ಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಕಾರ್ಯದರ್ಶೀ ಪ್ರವೀಣ್ ಟಿ., ಉಪಾಧ್ಯಕ್ಷರಾದ ಪದ್ಮನಾಭ ಶೆಣೈ, ರಾಜೇಶ್ ಕಾವೇರಿ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *