Header Ads
Header Ads
Breaking News

ಎರ್ಮಾಳಿನಲ್ಲಿ ಕರಾವಳಿ ಫ್ರೆಂಡ್ಸ್‌ನ ಕ್ರಿಕೆಟ್ ಪಂದ್ಯಾಕೂಟ ಯುವಶಕ್ತಿಯ ಸದ್ಭಳಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಪಂದ್ಯಾಟಕ್ಕೆ ಚಾಲನೆ ನೀಡಿದ ಶಾಸಕ ಸೊರಕೆ ಮಾತು

ಯಾವುದೇ ದೇಶಕ್ಕೆ ಹೊಲಿಸಿದರೆ ಅತೀ ಹೆಚ್ಚು ಯುವ ಸಮುದಾಯ ಹೊಂದಿರುವ ದೇಶ ನಮ್ಮದು. ಈ ಯುವ ಶಕ್ತಿಯ ಸದ್ಭಳಕೆ ಆದಾಗ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದಾಗಿ ಕಾಪು ಕ್ಷೇತ್ರ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಎರ್ಮಾಳು ಕರಾವಳಿ ಫ್ರೆಂಡ್ಸ್ ಆಯೋಜಿಸಿದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಯುವಕರಿಗೆ ಉತ್ತಮ ಮಾರ್ಗದರ್ಶನ ದೊರೆತಾಗ, ಅವರು ಸಮಜೋಮುಖಿಯಾಗಿ ಬೆಳೆಯಲು ಸಾಧ್ಯ, ನೂರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಈ ಕರಾವಳಿ ಫ್ರೆಂಡ್ಸ್ ಯುವ ಶಕ್ತಿ ಈ ಊರಿನ ಬಲುದೊಡ್ಡ ಆಸ್ತಿ ಎಂದರು.

ಮುಖ್ಯ ಅಥಿಯಾಗಿ ಭಾಗವಹಿಸಿದ ಅದಾನಿ ಯುಪಿಸಿ‌ಎಲ್ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ನಮ್ಮ ಕರಾವಳಿಗರಿಗೆ ಬಲುದೊಡ್ಡ ಆಸ್ತಿ ಈ ಬೀಜ್, ಇದನ್ನು ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸೋದ್ಯಮ ಬೆಳೆಸುವ ಎಲ್ಲಾ ಅವಕಾಶಗಳಿದೆ ಎಂದರು

ಇದೇ ವೇಳೆ ಶಿಕ್ಷಣ ಸಹಿತ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಪ್ರಮುಖರಾದ ಶೈಲೇಶ್ ಪೂಜಾರಿ, ವೈ. ಬಾಲಚಂದ್ರ, ದೀಪಕ್ ಎರ್ಮಾಳು, ವೈ. ದಾಮೋದರ್, ನವೀನ್‌ಚಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಅರುಣಾ ಕುಮಾರಿ, ಕಿಶೋರ್ ಕುಮಾರ್, ಗಂಗಾಧರ್ ಸುವರ್ಣ, ಸಿರಾಜ್‌ಉದ್ಧೀನ್ ಹಾಗೂ ಮುಂಬಾಯಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್