Header Ads
Header Ads
Breaking News

ಎರ್ಮಾಳಿನಲ್ಲಿ ಹೆದ್ದಾರಿ ಕಾಮಗಾರಿ ಮತ್ತಷ್ಟು ಅಪಾಯಕಾರಿ ನಿರಂತರ ಉರುಳುತ್ತಿದೆ ದ್ವಿಚಕ್ರ ವಾಹನಗಳು.

ಆಮೆಗತಿಯಲ್ಲಿ ಸಾಗುತ್ತಿರುವ ಹೆದ್ದಾರಿ ಕಾಮಗಾರಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಪ್ರಸಂಗಗಳು ಎರ್ಮಾಳಿನ ಅವೈಜ್ಞಾನಿಕ ಡೈವರ್ಶನ್ ಬಳಿ ನಡೆಯುತ್ತಿದ್ದು, ಹೆದ್ದಾರಿ ಎಲ್ಲೆಡೆ ಹರಡಲಾದ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳು ಉರುಳುತ್ತಿದ್ದು ಅದೇಷ್ಟೋ ಮಂದಿ ಗಾಯಗೊಂಡು ಆಸ್ಪತ್ರೆ ಸೇರುವಂತ್ತಾಗಿದೆ.

v


ಕಳೆದ ಸುಮಾರು ಎಂಟು ವರ್ಷಗಳಿಂದ ಮಂಗಳೂರು-ಕುಂದಾಪುರ ಹೆದ್ದಾರಿ ಚತುಷ್ಪಥ ನಡೆಯುತ್ತಿದ್ದರೂ ಕಾಮಗಾರಿ ಶೀಘ್ರವಾಗಿ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಆಮೆಗತಿಯ ಕಾಮಗಾರಿಗೆ ಮೂಲ ಕಾರಣ ಹುಡುಕ ಹೊರಟರೆ ಪಡುಬಿದ್ರಿ ಪೇಟೆ ಅಗಲೀಕರಣಕ್ಕೆ ಮತ್ತೆ ವಿಘ್ನ ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ. ಪೇಟೆಭಾಗದಲ್ಲಿ ಅರೆಬರೆ ತುಂಡರಿಸಿದ ಕಟ್ಟಡಗಳು ಪಾರ್ಕಿಂಗ್‌ಗೆ ಅವಕಾಶವೇ ಇಲ್ಲದಂತೆ ನವೀಕರಣಗೊಳ್ಳುತ್ತಿದೆ. ಒಟ್ಟಿನಲ್ಲಿ ಈ ಎಲ್ಲಾ ವಿದ್ಯಾಮಾನಗಳ ಪ್ರಭಾವದಿಂದಾಗಿ ಹೆದ್ದಾರಿ ಕಾಮಗಾರಿ ವೇಗ ಪಡೆಯುತ್ತಿಲ್ಲ ಎಂಬ ಮಾತುಗಳು ಗುತ್ತಿಗೆ ಕಂಪನಿ ಮೂಲವೊಂದು ದೃಢಪಡಿಸುತ್ತಿದೆ. ತೆಂಕ ಎರ್ಮಾಳು ನೇರಳ್ತಾಯ ಗುಡಿ ಸಮೀಪ ನಡೆಯುತ್ತಿರುವ ಕಾಮಗಾರಿಯ ಹಿನ್ನಲೆಯಲ್ಲಿ ಸಿಂಗಲ್ ರಸ್ತೆಯಿಂದ ಏಕಮುಖ ಸಂಚಾರ ರಸ್ತೆಗೆ ಎಂಟ್ರಿ ಕೊಡುವ ಡೈವರ್ಶನ್ ಅವೈಜ್ಞಾನಿಕವಾಗಿದ್ದು, ಪಥ ಬದಲಾಯಿಸು ಯಾವುದೇ ನಾಮಫಲಕಗಳಿಲ್ಲ, ತಿರುಗುವ ಪ್ರದೇಶದಲ್ಲೇ ಇದ್ದ ಒಂದು ಚಿನ್ನೆ ಕಂಡೂ ಕಾಣದಂತ್ತಿದ್ದು ವಾಹನಗಳು ಡೈವರ್ಶನ್‌ನಲ್ಲಿ ತಿರುಗದೆ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿ ಅಪಘಾತಗಳಿಗೆ ಏತುವಾಗುತ್ತಿದೆ. 

ಡೈವರ್ಶನ್‌ನಲ್ಲಿ ಎಲ್ಲೆಡೆ ಹರಡಿದ ಜಲ್ಲಿ ಕಲ್ಲುಗಳು ವಾಹನಗಳ ಚಕ್ರಗಳಿಗೆ ಸಿಲುಕಿ ಹಾರಿ ಯಾವುದೇ ಹೊತ್ತಲ್ಲಿ ಪಾದಚಾರಿ ಶಾಲಾ ಮಕ್ಕಳು ಸಹಿತ ಸಾರ್ವಜನಿಕರ ತಲೆಯೋಡೆಯುವ ಸಾಧ್ಯತೆಯನ್ನು ನಿರ್ಲಕ್ಷ್ಯ ಮಾಡುವಂತ್ತಿಲ್ಲ. ಈ ಸಮಸ್ಯೆ ತೀವೃತೆಯನ್ನು ಪಕ್ಕದಲ್ಲೇ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಮುಖ್ಯಸ್ಥರ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದಾಗಿ ಹೆದ್ದಾರಿಯ ನಿತ್ಯ ಸಂಚಾರಿ ನವೀನ್ ಎಂಬವರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.

ವರದಿ-ಸುರೇಶ್ ಎರ್ಮಾಳ್