Header Ads
Header Ads
Breaking News

ಎರ್ಮಾಳಿನ “ಎಲ್” ಮಾದರಿಯ ಡೈವರ್ಶನ್ ಅಪಘಾತಕ್ಕೆ ಆಹ್ವಾನ: ಅಪಘಾತಗಳು ನಡೆದರೂ ಎಚ್ಚರಗೊಳ್ಳದ ಇಲಾಖೆ..

ತೆಂಕ ಎರ್ಮಾಳು ನೇರಳ್ತಾಯ ಗುಡಿಯ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನಲೆಯಲ್ಲಿ ನವಯುಗ್ ಕಂಪನಿ ನಿರ್ಮಿಸಿದ “ಎಲ್” ಮಾದರಿಯ ಹೆದ್ದಾರಿ ಡೈವರ್ಶನ್ ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಹೆದ್ದಾರಿ ಇಲಾಖೆಯಾಗಲೀ ಕಾಮಗಾರಿ ಗುತ್ತಿಗೆ ಕಂಪನಿ ನವಯುಗ್ ಆಗಲೀ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ದೂರಿದ್ದಾರೆ.


ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ರಮೇಶ್ ಆಚಾರ್ಯ, ಹೆದ್ದಾರಿ ಸಂಚಾರಿಗಳ ಪ್ರಾಣಕ್ಕೆ ಕುತ್ತು ತರುವ ಆಮೆಗತಿಯ ಕಾಮಗಾರಿ ಒಂದು ಕಡೆಯಾದರೆ, ಮತ್ತೊಂದು ಕಡೆ ಎರ್ಮಾಳು ನೇರಳ್ತಾಯ ಗುಡಿಯ ಸಮೀಪದ “ಎಲ್” ಮಾದರಿಯ ಅಪಾಯಕಾರಿ ಅವೈಜ್ಞಾನಿಕ ಡೈವರ್ಶನ್ ಮಾನವ ಬಲಿಗಾಗಿ ಕಾಯುವಂತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಎರ್ಮಾಳಿಗೆ ರಾಹುಲ್ ಗಾಂಧಿ ಭೇಟಿ ಹಿನ್ನಲೆಯಲ್ಲಿ ಈ ಭಾಗದಲ್ಲಿ ತಾತ್ಕಾಲಿಕ ಡೈವರ್ಶನ್ ಮಾಡಲಾಗಿತ್ತು. ಆ ಬಳಿಕ ಈ ಅವೈಜ್ಞಾನಿಕ ಪಥಬದಲಾವಣಾ ಸ್ಥಳವನ್ನು ಮುಚ್ಚ ಬೇಕಾಗಿದ್ದರೂ ಅದನ್ನು ಮುಚ್ಚದೆ ನವಯುಗ್ ನಿರ್ಲಕ್ಷ್ಯ ಧೋರಣೆ ತಾಳಿದ ಪರಿಣಾಮ ಬೆಂಗಳೂರಿನ ನಿವಾಸಿ ಮಣಿಪಾಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಯೋರ್ವ ದಾರುಣಾವಾಗಿ ಮೃತಪಟ್ಟಿದ್ದ. ಆ ಘಟನೆಯ ಬಳಿಕ ಕೊಂಚ ಎಚ್ಚೆತ್ತುಕೊಂಡ ಕಂಪನಿ ಇದೀಗ ಡೈವರ್ಶನ್ ಬಗ್ಗೆ ಕೆಲವೊಂದು ಎಚ್ಚರಿಕಾ ನಾಮಫಲಕವನ್ನು ಅಳವಡಿಸಲಾಯಿತಾದರೂ, ಅಪಾಯಕಾರಿ “ಎಲ್” ಮಾದರಿಯ ಡೈವರ್ಶನ್ ಅದೇ ರೂಪದಲ್ಲಿದ್ದು ಬದಲಾವಣೆ ಕಂಡಿಲ್ಲ. ಇದರಿಂದಾಗಿ ಮತ್ತೊಂದು ಕಡೆಯಿಂದ ಬರುವ ವಾಹನಕ್ಕೂ ಪಥಬದಲಿಸುವ ವಾಹನಕ್ಕೂ ಮುಖಾಮುಖಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ತಕ್ಷಣ ಈ ಭಾಗದ ರಾಜಕೀಯ ಮುಖಂಡರಾಗಲೀ, ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಾಗಲೀ ಇಲ್ಲ ಗುತ್ತಿಗೆ ಕಂಪನಿ ನವಯುಗ್ ಆಗಲೀ ಸ್ಪಂಧಿಸುವ ಮೂಲಕ ಮುಂದೆ ಸಂಭವಿಸ ಬಹುದಾದ ಅಪಾಯವನ್ನು ತಪ್ಪಿಸುವಂತ್ತೆ ವಿನಂತಿಸಿದ್ದಾರೆ.