Header Ads
Header Ads
Breaking News

ಎರ್ಮಾಳು ಜಂಕ್ಷನ್ ಬಳಿ ಆಕಸ್ಮಿಕ ಬೆಂಕಿ:ವಿಳಂಬವಾಗಿ ಆಗಮಿಸಿದ ಉಡುಪಿ ಅಗ್ನಿ ಶಾಮಕದಳ

ಎರ್ಮಾಳಿನ ಜಂಕ್ಷನ್ ಬಳಿಯ ಮುಳ್ಳು ಪೊದೆಗಳಿಗೆ ಕಳೆದ ರಾತ್ರಿ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದದೆ. ಸ್ಥಳೀಯವಾಗಿ ವಾಸದ ಮನೆಗಳಿದ್ದು ಅಪಾಯದ ಮುನ್ಸೂಚನೆ ಇದ್ದ ಕಾರಣ ತಕ್ಷಣ ಉಡುಪಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಯಿತು. ಬರೋಬ್ಬರೀ ಒಂದುವರೆ ಗಂಟೆ ವಿಳಂಬವಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ರಾತ್ರಿ ಸುಮಾರು 9ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರಾದರೂ ಬೆಂಕಿ ತೀವೃ ಸ್ವರೂಪ ಪಡೆದಿದೆ, ಅದೇ ವೇಳೆ ಪಡುಬಿದ್ರಿ ಠಾಣೆಗೆ ಕರೆ ಮಾಡಲಾಗಿದ್ದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ಯುಪಿಸಿಎಲ್ ಕಂಪನಿಯ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ನಮ್ಮ ಎರಡೂ ವಾಹನಗಳು ಕೆಟ್ಟು ಹೋಗಿದೆ ಎಂಬ ಉತ್ತರ, ಅದೇ ಸಂದರ್ಭ ಪೊಲೀಸರು ಉಡುಪಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಳಾಸ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಬೆಂಕಿ ತೀವೃತೆ ಕಂಡುಕೊಂಡಿದ್ದು ಮನೆಗಳಿಗೆ ಅಪಾಯ ಸಂಭವಿಸುವ ಮಟ್ಟಕ್ಕೆ ತಲುಪಿದಾಗ, ಸಾರ್ವಜನಿಕರು ಸತತ ಪ್ರಯತ್ನದಿಂದ ಪಂಪ್ ಮೂಲಕ ನೀರು ಚುಮ್ಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.

ಅಗ್ನಿಶಾಮಕ ದಳದ ವಿಳಂಬ ಧೋರಣೆಯನ್ನು ಸಾರ್ವಜನಿಕರು ಪೊಲೀಸರಲ್ಲಿ ಪ್ರಶ್ನಿಸಿದಾಗ, ಮತ್ತೆ ಪೊಲೀಸರು ಅಗ್ನಿಶಾಮಕ ದಳಕ್ಕೆ ಪೋನಾಯಿಸಿ ಮನೆಗಳಿಗೆ ಏನಾದರೂ ಸಮಸ್ಯೆ ಸಂಭವಿಸಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದೇವೆ ಎಂದಿದ್ದಾರೆ ಸ್ಥಳದಲ್ಲಿದ್ದ ಪೊಲೀಸರು. ಕೊನೆಗೆ ಅವರೊಂದಿಗಿದ್ದ ಹಿರಿಯ ಅಧಿಕಾರಿಯೋರ್ವರ ಮಾತಿನಂತೆ ಬಂದ ಕರ್ಮಕ್ಕೆ ಇಲ್ಲದ ಬೆಂಕಿಗೆ ನೀರು ಚುಮ್ಮಿಸಿ ಮರಳಿದ್ದಾರೆ ಎಂಬುದಾಗಿ ಸ್ಥಳೀಯ ನಿವಾಸಿ ಗಣೇಶ್ ಎಂಬವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

Leave a Reply