Header Ads
Header Ads
Breaking News

ಎರ್ಮಾಳು ನಡಿಯಾಲ್ ಶ್ರೀ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ : ಯುವಕ-ಮಹಿಳಾ ಮಂಡಳಿಗಳೇ ಈ ದೈವಸ್ಥಾನದ ಆಸ್ತಿ

ಎರ್ಮಾಳು ನಡಿಯಾಲ್ ಶ್ರೀ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವು ಬುಧವಾರ ರಾತ್ರಿ ಗ್ರಾಮದ ಎಲ್ಲಾ ಸಮಾಜದ ಭಾಂದವರ ಕೂಡುವಿಕೆಯಿಂದ ಬಹಳ ವಿಜ್ರಂಭಣೆಯಿಂದ ನಡೆಯಿತು.ಈ ಬಗ್ಗೆ ಮಾತನಾಡಿದ ದೈವಸ್ಥಾನದ ಸಮಿತಿಯ ಪ್ರಮುಖರಾದ ಲಕ್ಷ್ಮಣ್ ಬೆಳ್ಚಡ, ಪ್ರತೀ ವರ್ಷವೂ ಈ ನಡಿಯಾಲ್ ಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ ನಡೆಯುತ್ತಿದ್ದು, ಈ ದೈವಸ್ಥಾನಕ್ಕೆ ಈ ದೈವಸ್ಥಾನದ ಯುವಕ-ಮಹಿಳಾ ಮಂಡಳಿಗಳೇ ಆಸ್ತಿ ಮಾತ್ರವಲ್ಲ ಶಕ್ತಿ ಕೂಡ. ಅದಕ್ಕೆ ಪೂರಕವಾಗಿ ದೈವದ ಅಪ್ಪಣೆಯಂತ್ತೆ ಇಲ್ಲಿನ ವಾರ್ಷಿಕ ನೇಮೋತ್ಸವ ಒಂದು ವರ್ಷ ದೈವಸ್ಥಾನದ ಅಂಗಣದಲ್ಲಿ ನಡೆದರೆ, ಮತ್ತೊಂದು ವರ್ಷ ಎರಡು ಕೀ.ಮೀ. ದೂರದ ಶಾಂತಿ ಬೆಟ್ಟು ಎಂಬಲ್ಲಿನ ಜವನೆರೆ ಕಟ್ಟೆ ಎಂಬಲ್ಲಿ ನಡೆಯುತ್ತದೆ. ಈ ವರ್ಷದ ನೇಮೋತ್ಸವದ ಪೂರ್ವಬಾವಿಯಾಗಿ ಈ ದೈವಸ್ಥಾನಕ್ಕೆ ಸಂಬಂಧಪಟ್ಟ ಸಾನದ ಮನೆಯಲ್ಲಿ ಮಂಗಳವಾರ ರಾತ್ರಿ ತಂಬಿಲ ಸೇವೆ ನಡೆದು, ಬುಧವಾರ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿ, ಸಂಜೆ ಗ್ರಾಮದ ಪ್ರಮುಖರ ಉಪಸ್ಥಿತಿಯಲ್ಲಿ ಭಂಡಾರ ಇಳಿದು ರಾತ್ರಿ ನೇಮೋತ್ಸವ ನಡೆಯುತ್ತದೆ ಎಂದರು.

ಈ ಸಂದರ್ಭ ದೈವಸ್ಥಾನ ಸಮಿತಿಯ ಅಧ್ಯಕ್ಷ ರತ್ನಾಕರ್ ಕೋಟ್ಯಾನ್, ದೈವದ ಪಾತ್ರಿಗಳಾದ ಜಯ ಪೂಜಾರಿ, ಮುರಳಿ ಪೂಜಾರಿ, ಅರ್ಚಕ ದಾನು ಪೂಜಾರಿ, ವೈ ಬಾಲಚಂದ್ರ, ವಸಂತ ಶೆಟ್ಟಿ, ಸುಂದರ ಪೂಜಾರಿ, ನಿರಂಜನ ಶೆಟ್ಟಿ, ಪದ್ಮನಾಭ ಮುಂತಾದವರಿದ್ದರು.

Related posts

Leave a Reply