Header Ads
Header Ads
Breaking News

ಎರ್ಮಾಳು ನಾರಾಯಣಗುರು ಮಂದಿರದಲ್ಲಿ ಗುರುಜಯಂತಿ ಆಚರಣೆ. ನೂರಾರು ಭಕ್ತಾಧಿಗಳು ಗುರುಗಳ ಧಾರ್ಮಿಕ ಕಾರ್ಯದಲ್ಲಿ ಬಾಗಿ.

ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಹುಟ್ಟು ಹಬ್ಬವನ್ನು ತೆಂಕ ಎರ್ಮಾಳು ನಾರಾಯಣ ಗುರು ಸೇವಾ ಮಂದಿರದಲ್ಲಿ ಬಹಳ ವಿಜ್ರಂಭಣೆಯಿಂದ ನೆರವೇರಿಸಲಾಯಿತು.ಈ ಬಗ್ಗೆ ಮಾತನಾಡಿದ ಸಂಸ್ಥೆಯ ಸದಸ್ಯ ರವಿಪ್ರಕಾಶ್, ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯ ಅಂಗವಾಗಿ ನಮ್ಮ ಸಂಸ್ಥೆಯಲ್ಲಿ, ಬೆಳಿಗ್ಗೆ ಪೂಜಾಧಿ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸಂಜೆ ಆರರ ಸುಮಾರಿಗೆ ಕಲಶವೇರಿ ಭಜನಾ ಕಾರ್ಯಕ್ರವನ್ನು ದೀಪ ಬೆಳಗಿಸುವ ಮೂಲಕ ಸಂಸ್ಥೆಯ ಅಧ್ಯಕ್ಷ ವೈ. ಬಾಲಚಂದ್ರ ಉದ್ಘಾಟಿಸಿದರು.

ಆ ಬಳಿಕ ಮಾತೃ ಸಂಸ್ಥೆ ಹಾಗೂ ಅಂಗ ಸಂಸ್ಥೆಯಾದ ಮಹಿಳಾ ಮಂಡಳಿಯಿಂದ ರಾತ್ರಿ 10.30ರ ವರಗೆ ಭಜನಾ ಕಾರ್ಯಕ್ರಮ ಜರಗಿತು, ತದ ನಂತರ ಮಹಾ ಪೂಜೆಯೊಂದಿಗೆ ಮಂಗಳ ಹಾಡಲಾಯಿತು. ಆ ಬಳಿಕ ಆಗಮಿಸಿದ ಭಕ್ತಾಧಿಗಳಿಗೆ ವಿಶೇಷ ಅನ್ನ ಪ್ರಸಾದದ ವಿತರಣೆ ನಡೆಯಿತು. ಗುರುಜಯಂತಿಯ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಗುರುಪೂಜೆ, ವಿಶೇಷ ಪೂಜೆ ನಡೆಯಿತು.

Related posts

Leave a Reply