Header Ads
Header Ads
Breaking News

ಎರ್ಮಾಳು ಪ್ರೀಮಿಯರ್‌ಲೀಗ್ : ಪ್ರಶಸ್ತಿ ಜಯಿಸಿದ ರಾಯಲ್ ರಾಕರ್‍ಸ್ ತಂಡ

ಎರ್ಮಾಳು ನಾರಾಯಣಗುರು ಸ್ಫೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಎರ್ಮಾಳು ಪ್ರೀಮಿಯರ್ ಲೀಗ್ ಪಂದ್ಯಾಟ ನಡೆಯಿತು. ಎರ್ಮಾಳು ಪರಿಸರದ ಕ್ರೀಡಾ ಪಟುಗಳನ್ನು ಒಳಗೊಂಡ ಐದು ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಎರ್ಮಾಳು ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾ ಕೂಟವನ್ನು ನಾರಾಯಣಗುರು ಸೇವಾ ಮಂದಿರದ ಅಧ್ಯಕ್ಷ ವೈ. ಬಾಲಚಂದ್ರ ಉದ್ಘಾಟಿಸುವ ಮೂಲಕ ಆರಂಭಗೊಂಡಿದೆ.ಎರ್ಮಾಳು ನಾರಾಯಣಗುರು ಸ್ಫೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ, ಎರ್ಮಾಳು ಪರಿಸರದ ಕ್ರೀಡಾ ಪಟುಗಳನ್ನು ಒಳಗೊಂಡ ಐದು ತಂಡಗಳು ಭಾಗವಹಿಸಿದ ಎರ್ಮಾಳು ಪ್ರೀಮೀಯರ್ ಲೀಗ್ ಕ್ರಿಕೆಟ್ ಪಂದ್ಯಾ ಕೂಟದಲ್ಲಿ, ಅಂತಿಮವಾಗಿ ಸಂತೋಷ್ ಪೂಜಾರಿ ನೇತೃತ್ವದ ರಾಯಲ್ ರಾಕರ್‍ಸ್ ತಂಡ ಗಣೇಶ್ ನೇತೃತ್ವದ ಶ್ರೀರಾಮ್ ತಂಡವನ್ನು ಪೈನಲ್ ಪಂದ್ಯಾಟದಲ್ಲಿ ಮಣಿಸುವ ಮೂಲಕ 2018ರ ಮೂರನೇ ಆವೃತ್ತಿಯ ಎರ್ಮಾಳ್ ಪ್ರೀಮಿಯರ್‌ಲೀಗ್ ಚಾಂಪಿಯಾನ್ ಆಗಿ ಹೊರ ಹುಮ್ಮಿದೆ.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಸ್ಥಳೀಯ ಮೊಗವೀರ ಮುಂದಾಳು ವೈ. ದಾಮೋದರ್ ಸುವರ್ಣ ಮಾತನಾಡಿ, ಇಷ್ಟು ಸಣ್ಣ ಗ್ರಾಮದಲ್ಲಿ ಐದು ತಂಡಗಳಿಗೆ ಬೇಕಾಗುವ 55ಮಂದಿ ಉತ್ತಮ ಕ್ರೀಡಾ ಪಟುಗಳು ಹುಟ್ಟಿ ಕೊಂಡಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರವಾಗಿದೆ, ಅದೇಷ್ಟೇ ತಂಡಗಳು ಭಾಗವಹಿಸಿದ್ದರೂ ಅಂತಿಮವಾಗಿ ಒಂದು ತಂಡ ಮಾತ್ರ ಪ್ರಶಸ್ತಿ ಪಡೆಯಲು ಸಾಧ್ಯ, ಆ ನಿಟ್ಟಿನಲ್ಲಿ ಸೋತ ತಂಡಗಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಗೆಲುವಿಗಾಗಿ ಕಠಿಣ ಅಭ್ಯಾಸ ಮಾಡ ಬೇಕಾಗಿದೆ ಎಂದರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ನಗದು ಸಹಿತ ಟ್ರೋಫಿಯನ್ನು ಹಸ್ತಾಂತರಿಸಿದ್ದಾರೆ. ಇದೇ ಸಂದರ್ಭ ಎಸ್.ಎನ್.ಜಿಸಿ, ಕ್ರಿಕೆಟ್ ತಂಡದಲ್ಲಿ ಆಟವಾಡಿದ ಹಿರಿಯ ಆಟಗಾರರಾದ, ವೈ. ಬಾಲಚಂದ್ರ, ವೈ. ದಾಮೋದ್, ವೈ. ಜಯಕರ್, ಮನೋಹರ್ ಸುವರ್ಣ, ಧನ್‌ರಾಜ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ, ಉಪಾಧ್ಯಕ್ಷ ರತ್ನಾಕರ್ ಕೋಟ್ಯಾನ್, ಗುಣಾಕರ್ ಶೆಟ್ಟಿ, ಪವನ್ ಕುಮಾರ್, ಗಣೇಶ್ ಕೋಟ್ಯಾನ್, ನಾಗೇಶ್ ಪ್ರಸನ್ನ, ಪ್ರಶಾಂತ್ ಕುಮಾರ್, ದೇವಪ್ಪ ಅಂಚನ್, ವಿಜಯ ಕುಮಾರ್, ಪ್ರಶಾಂತ್ ಮುಂತಾದವರಿದ್ದರು.

Related posts

Leave a Reply