Header Ads
Header Ads
Breaking News

ಎರ್ಮಾಳು ಬೈದಶ್ರೀ ಟ್ರೋಪಿ ಉದ್ಘಾಟನಾ ಸಮಾರಂಭ

ಯಾವುದೇ ಕ್ರೀಡಾ ಕೂಟಗಳಲ್ಲಿ ಅದೇಷ್ಟೇ ತಂಡಗಳು ಪಾಲ್ಗೊಂಡರೂ ಅಂತಿಮವಾಗಿ ಬಹುಮಾನ ಪಡೆಯುವುದು ಒಂದೋ..ಎರಡೋ ತಂಡ, ಆದರೆ ಕ್ರೀಡೆ ಎಂಬುದು ಕೇವಲ ಬಹುಮಾನಕ್ಕಾಗಿಯಲ್ಲ, ಕ್ರೀಡೆಯಿಂದ ದೈಹಿಕ ಸಾಮಾರ್ಥ್ಯ ಸಹಿತ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂಬುದಾಗಿ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಹೇಳಿದ್ದಾರೆ.

ಅವರು ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಆಶ್ರಯದಲ್ಲಿ, ಗರೋಡಿ ಸಮೀಪದ ಗದ್ದೆಯಲ್ಲಿ ಯುವ ಪೀಳಿಗೆಯ ಒಕ್ಕೂಟದ ಅಂಗವಾಗಿ ಬಿಲ್ಲವ ಸಮಾಜ ಭಾಂದವರಿಗಾಗಿ ಆಯೋಜಿಸಿದ ಮೂರನೇ ವರ್ಷದ ವಾಲಿಬಾಲ್ ಹಾಗೂ ಥ್ರೋ ಬಾಲ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಗರೋಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು. ವಿವಿಧ ಬಿಲ್ಲವ ಸಂಸ್ಥೆಗಳಿಂದ 18 ಯುವಕರ ವಾಲಿಬಾಲ್ ತಂಡ ಹಾಗೂ ಯುವತಿಯರ ೮ ಥ್ರೋ ಬಾಲ್ ತಂಡಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಬೈದಶ್ರೀ ಮಹಿಳಾ ಮಂಡಳ ಅಧ್ಯಕ್ಷೆ ಮಮತ, ಸ್ಥಳೀಯರಾದ ವಸಂತ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.
ವರದಿ-ಸುರೇಶ್ ಎರ್ಮಾಳ್

Related posts

Leave a Reply